ಮಂಗಳೂರು:ಸರ್ವಧರ್ಮವೂ ಶ್ರೇಷ್ಠ, ಧರ್ಮ ಧರ್ಮದ ಮಧ್ಯೆ ದ್ವೇಷ ಸಾಧುವಲ್ಲ. ಪ್ರತಿಯೊಬ್ಬರು ಅನ್ಯಧರ್ಮವನ್ನು ಗೌರವಿಸುವುದರೊಂದಿಗೆ, ಸಹೃದಯತೆಯಿಂದ ಕಾಣುವುದೇ ಮಾನವಧರ್ಮ. ಸರ್ವಧರ್ಮ ಪ್ರೀತಿಯೇ ಸನಾತನ ಸಂಸ್ಕøತಿಯ ಮರ್ಮ ಎಂದು ಶಿವಗಿರಿ ಕೇರಳ ಮಠದ ಸತ್ಯಾನಂದತೀರ್ಥ ಸ್ವಾಮೀಜಿ ಹೇಳಿದರು.
ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶಾಭಿಷೇಕ ಅಂಗವಾಗಿ ನಡೆಯುವ ಸಭಾ ಕಾರ್ಯಕ್ರಮದ ಆಶೀರ್ವಚನದಲ್ಲಿ ಅವರು ಮಾತನಾಡಿದರು.
ಸನಾತನ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಧರ್ಮದ ಸಾರ, ಅರಿವು, ತತ್ವಗಳನ್ನು ಮುಂದಿನ ಪೀಳಿಗೆ ಉಳಿಸುವ ನಿಟ್ಟಿನಲ್ಲಿ ಮನೆಯ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕಾಗಿದೆ. ದೇವಾಲಯಗಳ ಬ್ರಹ್ಮಕಲಶೋತ್ಸವಗಳು ಆದರೆ ಸಾಲದು, ಆ ದೇವಾಲಯಗಳು ಆ ಊರಿನ ಪ್ರಧಾನ ಕೇಂದ್ರಗಳಾಗಿದ್ದು, ನಿರಂತರ ಇಲ್ಲಿ ಪ್ರವಚನ, ಧರ್ಮಬೋಧನೆ ನಡೆಯಬೇಕು ಎಂದರು.

ಕಾರ್ಯಕ್ರಮವನ್ನು ಪೆÇಳಲಿ ರಾಜರಾಜೇಶ್ವರಿ ದೇವಳದ ಪವಿತ್ರಪಾಣಿ ಮಾಧವ ಭಟ್ ಉದ್ಘಾಟಿಸಿದರು. ಉಳಾಯಿಬೆಟ್ಟು ಗ್ರಾ.ಪಂ. ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಉಳಾಯಿಬೆಟ್ಟು ಸಾಲೆ ವಿಶ್ವನಾಥ ಮಹಾಗಣಪತಿ ದೇವಳದ ಮುಖ್ಯ ಅರ್ಚಕ ಹರೀಶ್ ಭಟ್, ಸೈಂಟ್ ಆಂಥೊನಿ ಚರ್ಚ್ ಧರ್ಮಗುರು ರೋಬರ್ಟ್ ಕ್ರಾಸ್ತಾ, ಬಿಜೆಪಿ ಹಿಂದುಳಿದ ವರ್ಗ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಗುರುಪುರ ದೈವಸ್ಥಾನ ಗಡಿಪ್ರಧಾನ ಪ್ರಮೋದ್ ಕುಮಾರ್, ತಾ.ಪಂ. ಸದಸ್ಯೆ ಅಪ್ಸತ್, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಫ್ರಾನ್ಸಿಸ್ ಕುಟಿನ್ಹೋ, ತಾ.ಪಂ. ಮಾಜಿ ಸದಸ್ಯ ಮಹಮ್ಮದ್ ಸಿರಾಜ್, ನೀರುಮಾರ್ಗ ವಲಯ ಬಂಟರ ಸಂಘದ ಅಧ್ಯಕ್ಷ ಸನತ್ ಕುಮಾರ್ ರೈ, ಪೆರ್ಮಂಕಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಭಜನಾ ಮಂದಿರ ಅಧ್ಯಕ್ಷ ದಿನೇಶ್ ಅಂಚನ್, ಉಳಾಯಿಬೆಟ್ಟು ಗ್ರಾ.ಪಂ. ಉಪಾಧ್ಯಕ್ಷೆ ಸೌಮ್ಯ ಪಂಡಿತ್, ಉಳಾಯಿಬೆಟ್ಟು ಕುಲಾಲ ಸಂಘ ಅಧ್ಯಕ್ಷ ವಾಸುದೇವ ಮೂಲ್ಯ, ಉಳಾಯಿಬೆಟ್ಟು ಗ್ರಾ.ಪಂ. ಸದಸ್ಯೆ ಶೋಭಾ ಉಪಸ್ಥಿತರಿದ್ದರು.
ದಯಾನಂದ್ ಕತ್ತಲ್ಸಾರ್ ಕಾರ್ಯಕ್ರಮ ನಿರೂಪಿಸಿದರು. ರಾಜೀವ ಶೆಟ್ಟಿ ಸಲ್ಲಾಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸದರ್ಶನ್ ಧನ್ಯವಾದ ಅರ್ಪಿಸಿದರು.
