ಮುಂಬಯಿ, : ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪಿತೃ, ನಗರದ ಹೆಸರಾಂತ ಹಿರಿಯ ಉದ್ಯಮಿ ವೀರಪ್ಪ ಶೆಟ್ಟಿ (93.) ಇವರು ಕಳೆದ ಮಂಗಳವಾರ ತಡರಾತ್ರಿ ದೀರ್ಘಾವಧಿಯ ಅನಾರೋಗ್ಯದಿಂದ ಬ್ರೀಜ್ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.ಪ್ರಥಿ ಅಪಾರ್ಟ್ಮೆಂಟ್, ಅಲ್ಟೊಮೊಂಟೋ ರಸ್ತೆ, ಕೀಮ್ಸ್ ಕಾರ್ನಾರ್ ಮುಂಬಯಿ ನಿವಾಸದಲ್ಲಿ ವಾಸವಾಗಿದ್ದ ಮೃತರು 2013ನಿಂದ ಪಾಶ್ರ್ಚಪೀಡಿತರಾಗಿದ್ದರು. ಪಿತಾರನ್ನು ಸುನೀಲ್ ಶೆಟ್ಟಿ ಮನೆಯಲ್ಲೇ ಐಸಿಯು ರಚಿಸಿ ಆರೈಕೆ ಮಾಡುತ್ತಿದ್ದರು. ಮೃತರು ಪತ್ನಿ, ಸುಪುತ್ರ ಸುನೀಲ್ ಶೆಟ್ಟಿ, ಸುಪುತ್ರಿ ಸುಜಾತ ಶೆಟ್ಟಿ ಅವರನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಶಿಮಂತೂರು ನಿವಾಸಿ ಆಗಿದ್ದ ವೀರಪ್ಪ ಶೆಟ್ಟಿ ಇವರು ಕಿನ್ನಿಗೋಳಿ ತಾಳಿಪಾಡಿಗುತ್ತು ತೌಡ ಶೆಟ್ಟಿ ಮತ್ತು ಜಲಕಹಿತ್ಲು ನೊಕ್ಕು ಶೆಡ್ತಿ ದಂಪತಿ ಸುಪುತ್ರರಾಗಿದ್ದು ಮುಂಬಯಿಯಲ್ಲಿ ಅನೇಕ ದಶಕಗಳಿಂದ ನೆಲೆಯಾಗಿ ಓರ್ವ ಹಿರಿಯ ಹೊಟೇಲು ಉದ್ಯಮಿ ಆಗಿ ಜನಾನುರೆಣಿಸಿದ್ದರು. ನನ್ನ ತಂದೆಯೇ ನನ್ನ ರೋಲ್ಮೋಡೆಲ್ ಆಗಿದ್ದು ಅವರ ಅನಾರೋಗ್ಯದ ಬಳಿಕ ತಾನು ಯಾವುದೇ ಚಲನಚಿತ್ರಕ್ಕೆ ಸಹಿಹಾಕಿಲ್ಲದ್ದನ್ನು ಸುನೀಲ್ ಶೆಟ್ಟಿ ನೆನಪಿಸಿದ್ದಾರೆ.

