ಸುದ್ದಿ9ಕೈಕಂಬ: ಟೂರಿಸ್ಟ್ ವಾಹನವೊಂದು ಏರಲಾಗದೆ ರಿವರ್ಸ್ ಬಂದು ಹಿಂದಿನಿಂದ ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭಿರ ಗಾಯಗೊಂಡ ಘಟನೆ ಬೋಂದೆಲ್ ಸಮೀಪದ ಜಾರದಗುಡಿ ಮಂಜಲ್ಪಾದೆ ಎಂಬಲ್ಲಿ ಸೋಮವಾರ ಸಂಜೆಯ ವೇಳೆಗೆ ನಡೆದಿದೆ. ಗಾಯಗೊಂಡವನನ್ನು ವಿನಯ ಎಂದು ತಿಳಿದುಬಂದಿದ್ದು ಹೆಚ್ಚಿನ ವಿವರ ಲಭ್ಯವಾಗಿಲ್ಲ.
ಘಟನೆಯ ವಿವರ: ಆಂಧ್ರಪ್ರದೇಶದಿಂದ ಮಂಗಳೂರಿಗೆ ಪ್ರವಾಸಕ್ಕೆ ಬಂದಿದ್ದ ತಂಡದ ಟೂರಿಸ್ಟ್ ವಾಹನ ಮಂಗಳೂರಿನಿಂದ ಬೋಂದೆಲ್-ಪಚ್ಚನಾಡಿಯಾಗಿ ಪಿಲಿಕುಳ ನಿಸರ್ಗಧಾಮಕ್ಕೆ ಬರುವ ತವಕದಲ್ಲಿತ್ತು. ಈ ವೇಳೆ ಬೋಂದೆಲ್ ಸಮೀಪದ ಜಾರದಗುಡಿ ಮಂಜಲ್ಪಾದೆ ಎಂಬಲ್ಲಿನ ಏರು ರಸ್ತೆಯಲ್ಲಿ ಬಸ್  ಏರಲಾಗದೆ ರಿವರ್ಸ್ ಹೊಡೆಯಲಾರಂಭಿಸಿತು. ಈ ವೇಳೆ ಗ್ರಹಚ್ಚಾರ ಎಂಬಂತೆ ಬೈಕ್ನಲ್ಲಿ ಇಬ್ಬರು ಬರುತ್ತಿದ್ದರು.
ಟೂರಿಸ್ಟ್ ವಾಹನ ರಿವರ್ಸ್  ಬರುತ್ತಿರುವುದನ್ನು ಕಂಡ ಬೈಕ್ ಸವಾರರಿಬ್ಬರು ಬೈಕ್ನಿಂದ ಇಳಿದು ಓಡಲಾರಂಭಿಸಿದ್ದಾರೆ. ಆದರೆ ದುರದೃಷ್ಟವಶಾತ್ ವಿನಯ್ ಟೂರಿಸ್ಟ್ ವಾಹನದಿಂದ ತಪ್ಪಿಸಲಾಗದೆ ಅದರ ಎದುರಿನ ಚಕ್ರಕ್ಕೆ ಸಿಲುಕಿಕೊಂಡರು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಅವರ ಕಾಲು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಎಜೆ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಸಹಸವಾರ ಅಪಾಯದಿಂದ ಪಾರಾಗಿದ್ದಾರೆ.

14 vp bayk

14 vp bus
ವಿನಯ್ ಅವರ ಬೈಕ್ ಟೂರಿಸ್ಟ್ ವಾಹನದ ಹಿಂದಿನ ಚಕ್ರಕ್ಕೆ ಸಿಲುಕಿ ಕೊನೆಗೆ ತನ್ನ ವೇಗವನ್ನು ತಗ್ಗಿಸಿ ತೆಂಗಿನ ಮರಕ್ಕೆ ತಾಗಿ ನಿಂತುಕೊಂಡಿತು. ಚಕ್ರದಡಿಯಲ್ಲಿ ಸಿಲುಕಿದ ವಿನಯ್ ಅವರನ್ನು ಪ್ರಾಯಾಸಪಟ್ಟು ಚಕ್ರದಿಂದ ಹೊರತೆಗೆಯಲಾಗಿದೆ. ಟೂರಿಸ್ಟ್ ವಾಹನ ಆಂಧ್ರಪ್ರದೇಶದಿಂದ ಬರುತ್ತಿತ್ತು ಎನ್ನಲಾಗಿದೆ. ಟೆಂಪೋದಲ್ಲಿದ್ದವರಿಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ತಿಳಿದುಬಂದಿದೆ.

By Suddi9

Leave a Reply

Your email address will not be published. Required fields are marked *