ಉಡುಪಿ:-ಜೇಸಿಐ ವಲಯ 15 ಇದರ ಜೇಸಿಐ ಉಡುಪಿ ಸಿಟಿ,ಉಡುಪಿ ಸಿಲ್ವರ್ ಸ್ಟಾರ್,ಕಲ್ಯಾಣಪುರಕೋಸ್ಮೋ ಸಿಟಿ,ಪರ್ಕಳ ಉಡುಪಿ ಇಂದ್ರಾಳಿ ಮುಂತಾದ ಘಟಕಗಳ ಆಶ್ರಯದಲ್ಲಿ ಫೆ.19 ಆದಿತ್ಯವಾರಅಜ್ಜರಕಾಡು ಪಾರ್ಕ್ ನಲ್ಲಿ ಸೇವ್ ಬರ್ಡ್‍ಕ್ಯಾಂಪೆನ್ (ಹಕ್ಕಿಗಳಿಗೆ ನೀರು ಮತ್ತುಆಹಾರವನ್ನು ನೀಡುವುದು) ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ವಲಯಾದ್ಯಕ್ಷ ಸಂತೋಷ್ ಜಿ ಉದ್ಘಾಟಿಸಿ ಮಾತನಾಡಿ ಬೇಸಿಗೆ ಸಮಯದಲ್ಲಿ ಹಕ್ಕಿಗಳು ನೀರು ಮತ್ತುಆಹಾರ ಸಿಗದೆ ನಶಿಸಿಹೋಗುತ್ತಿದೆ ಈ ಬಗ್ಗೆ ಈ ರೀತಿಯಕಾರ್ಯಕ್ರಮ ವಲಯಾದ್ಯಂತ ನಡೆಸಲಾಗುವುದುಎಂದರು.
ಸ್ವಚ್ಚ ಭಾರತಯೋಜನೆಯಉಡುಪಿ ರಾಯಭಾರಿ ಅವಿನಾಶ್‍ಕಾಮತ್ ಮಾತನಾಡಿ,ಉಡುಪಿಯಲ್ಲಿ ಬರ ಪರಿಸ್ಥಿತಿ ಎದುರಾಗುತ್ತಿದೆ ಈ ಬಗ್ಗೆ ಹಕ್ಕೆಗಳಿಗೂ ನೀರುಇಲ್ಲದೆಅದರ ಸಂತತಿ ಮುಂದಿನ ದಿನಗಳಲ್ಲಿ ನಶಿಸಬಹುದು ಹೀಗಾಗಿ ಈ ಕಾರ್ಯಕ್ರಮಅತ್ಯಂತಉತ್ತಮವಾಗಿದೆಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ವಲಯಉಪಾದ್ಯಕ್ಷೆ ಸೌಮ್ಯರಾಕೇಶ್,ವಲಯಕಾರ್ಯಕ್ರಮ ನಿರ್ದೇಶಕ ಅನಿಲ್ ಕುಮಾರ್,ಮನೋಜ್ ಕಡಬ,ಶ್ರೀನಿವಾಸ್ ಜಿ,ಘಟಕಾದ್ಯಕ್ಷರುಗಳಾದ ಜ್ಯೋತಿರಾಮನಾಥ ಶೆಟ್ಟಿ,ರಿತೇಶ್,ಶೆರ್ಲಿ ಮನೋಜ್,ಜಗದೀಶ್ ಶೆಟ್ಟಿ,ಸುಭಾಷ್ ಬಂಗೇರ, ಮುಂತಾದವರಿದ್ದರು.
ಕಾರ್ಯಕ್ರಮದ ಸಂಯೋಜಕರಾಘವೇಂದ್ರ ಪ್ರಭುಕರ್ವಾಲು ಸ್ವಾಗತಿಸಿ ವಂದಿಸಿದರು.
