ಬಂಟ್ವಾಳ: ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಪುದು ಜಿ.ಪಂ. ಸದಸ್ಯ ರವೀಂದ್ರ ಕಂಬಳಿ ಅವರಿಗೆ ಹಾವೇರಿಯ ಬಸವೇಶ್ವರ ಫೌಂಡೇಶನ್ ವತಿಯಿಂದ ಹಾವೇರಿಯ ರಾಣೆಬೆನ್ನೂರಿನ ಶಿಕ್ಷಕರ ಭವನದಲ್ಲಿ “ರಾಷ್ಟ್ರೀಯ ಬಸವರತ್ನ ಪ್ರಶಸ್ತಿ” ಪ್ರಧಾನ ಮಾಡಲಾಯಿತು. ಹಂಪಿ ಮುನಿರಾಬಾದ್ ಸದ್ದಾಮಪೀಠದ ಶ್ರೀ ಜಗದ್ಗುರು ಮದುಮಯಾನಂದ ಮಹಾ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ರಾಣೆಬೆನ್ನೂರು ಪುಟ್ಟಯ್ಯ ಪೀಠದ ಶ್ರೀಗುರು ಬಸವ ಮಹಾ ಸ್ವಾಮೀಜಿ, ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ| ಬಸವರಾಜ ಕೇಲಗಾರ, ಪತ್ರಕರ್ತ ಬಸವರಾಜ್ ಎಚ್. ಮಲ್ಲಿ ಉಪಸ್ಥಿತರಿದ್ದರು.

IMG_20170214_173821799

By Suddi9

Leave a Reply

Your email address will not be published. Required fields are marked *