ಕೈಕಂಬ: ಸೆಂಟ್ರಲ್ ಕಮಿಟಿ ಅಡ್ಡೂರು ಇದರ ಮುಖ್ಯ ಕಛೇರಿ ಉದ್ಘಾಟನಾ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇದರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವು ಫೆ. 12ರಂದು ಭಾನುವಾರ ಅಡ್ಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಜರಗಲಿದೆ.
ಇದರ ಉದ್ಘಾಟನೆಯನ್ನು ಬ್ಲಡ್ ಹೆಲ್ಪ್ ಲೈನ್ ಘಟಕದ ಮುಖ್ಯಸ್ಥ ಡಾ. ಇ.ಕೆ.ಎ ಸಿದ್ದಿಕ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಮ್ ಶರೀಫ್ ಅಳಕೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಮೊಹಿಯಿದ್ದೀನ್ ಬಾವಾ , ಜಿ.ಪಂ.ಸದಸ್ಯ ಯು.ಪಿ ಇಬ್ರಾಹಿಂ ಅಡ್ಡೂರು, ಟಿ ಸೈಯದ್ ತೋಕೂರು, ಶಾಫಿ ಕೊಯ್ಯಾರ್, ಎಮ್.ಎ ಅಹಮದ್ ಬಾವಾ , ಅಬ್ದುಲ್ ರೆಹಮಾನ್, ಗುರುಪುರ ಗ್ರಾ. ಪಂ ಅಧ್ಯಕ್ಷೆ ರುಕಿಯಾ, ಎ.ಕೆ ಮುಸ್ತಾಫಾ, ರುಕ್ಮಯ ಉಳಿಯ, ಗ್ರಾ.ಪಂ. ಸದಸ್ಯ ಎ.ಕೆ ರಿಯಾಝ್ ಅಡ್ಡೂರು,ಇಪ್ತಿಕಾರ್ ಅಹ್ಮದ್,ನಿಶಾರ್ ದಮ್ಯಾಮ್ ಉಳ್ಳಾಲ, ಮುಸ್ತಾಫ ದೆಮ್ಮಲ್ ಅಡ್ಡೂರು,ನಿಝಾಮ್ ನಿಝು ಮಂಗಳೂರು, ಎಮ್. ಎಸ್. ಹಬೀಬ್, ಎ.ಎನ್. ಅಬ್ದುಲ್ ರಝಾಕ್, ಮೊಹಮ್ಮದ್ ಶರೀಫ್, ಡಿ.ಎಸ್. ಅಶ್ರಫ್, ಎ.ಕೆ. ಇಸ್ಮಾಯಿಲ್ ಮುಂತಾದವರು ಭಾಗವಹಿಸಲಿದ್ದಾರೆ. ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
