ಬಂಟ್ವಾಳ : ಫೆ.10 ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಪ್ರತಿಭೆಗಳು ಸುಪ್ತವಾಗಿರುತ್ತವೆ. ಶಿಕ್ಷಕರು ಹಾಗೂ ಹೆತ್ತವರು ಅವುಗಳನ್ನು ಹುಡುಕಿ ತೆಗೆದು ಪರಿಚಹಿಸಿದಾಗ ಪ್ರತಿಭೆಯು ಅನಾವರಣಗೊಳ್ಳುತ್ತದೆ. ಚಿನ್ನವು ಪುಟಕ್ಕಿಟ್ಟಾಗ ಅಪ್ಪಟ ಬಂಗಾರವಾಗುವಂತೆ ವಿದ್ಯಾರ್ಥಿಗಳ ಪ್ರತಿಭೆಗಳು ಹೊರ ಹೊಮ್ಮಬೇಕಾದರೆ ಶಿಕ್ಷಣ ಕಾರ್ಯಕ್ರಮಗಳು ನೆರವೇರಿದಾಗ ಅವರ ಸಾಮಥ್ರ್ಯಗಳಿಗೆ ಹುರುಪು ತುಂಬುವ ವೇದಿಕೆಯಾಗುತ್ತವೆ, ಈ ನಿಟ್ಟಿನಲ್ಲಿ ಕಲಿಕೋತ್ಸವವು ನೆರವಾಗಿದೆ, ಅಲ್ಲದೆ ಮಕ್ಕಳ ಭವಿಷ್ಯದ ಕನಸುಗಳನ್ನು ನನಸು ಮಾಡುವಲ್ಲಿ ಹೆತ್ತವರ ಪ್ರೋತ್ಸಾಹವು ತುಂಬ ಮುಖ್ಯವಾಗಿದೆ ಎಂದು ಜಿ. ಪಂ. ಸದಸ್ಯೆ ಶ್ರೀಮತಿ ಮಂಜುಳಾ ಮಾಧವ ಮಾವೆಯವರು ಸರ್ವಾಜನಿಕ ಶಿಕ್ಷಣ ಇಲಾಖೆ, ಕ್ಷೇ. ಸಂ. ಕೇಂ. ಬಂಟ್ವಾಳ ಹಾಗೂ ಸ.ಸಂ.ಕೇಂ. ಕಲ್ಲಡ್ಕ ಮತ್ತು ಬಾಳ್ತಿಲ ವಲಯದ ಸ್ಪಷ್ಟ ಓದು ಶುದ್ಧ ಬರಹ, ಪಡೇ ಭಾರತ್ ಬಡೇ ಭಾರತ್ ನೆಲೆಯಲ್ಲಿ ಕಲಿಕೋತ್ಸವ 2017ರ ಕಾರ್ಯಕ್ರಮ ಹಾಗೂ ಶಾಲಾ ನವೀಕರಣಗೊಂಡ ಸಭಾಂಗಣವನ್ನು ಸರಕಾರಿ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್, ವೀರಕಂಭ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ರವರ ಜೊತೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

DSC_8441 01

ತಾ.ಪಂ.ಸದಸ್ಯೆ ಶ್ರೀಮತಿ ಗೀತಾ ಚಂದ್ರಶೇಖರ್‍ರವರು, ಶಾಲಾ ಪರಿಸರವು ವಿದ್ಯಾರ್ಥಿಗಳ ಬದುಕಿನ ಮೇಲೆ ತೀವ್ರವಾದ ಪ್ರಭಾವವನ್ನು ಬೀರುತ್ತದೆ, ಮಗು ತನ್ನ ಕಲಿಕೆಯ ಸಂದರ್ಭ ಕೇವಲ ಪಾಠವಲ್ಲದೇ ಇತರ ಪಠ್ಯೇತರ ಚಟುವಾಟಿಕೆಗಳ ಮೂಲಕ ಕಲಿಕೆಯನ್ನು ಪಡೆದಾಗ ಹೆಚ್ಚು ಅರ್ಥ ಪೂರ್ಣವಾಗುತ್ತದೆ, ಇದಕ್ಕೆ ಹೆತ್ತವರು, ಶಿಕ್ಷಕರು, ಸಮಾಜವು ಪ್ರೇರಣೆಯಾಗಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಲ್ಲಡ್ಕ ವಲಯದ ಶಿಕ್ಷಣ ಸಂಯೋಜಕಿ ಶ್ರೀಮತಿ ಪುಷ್ಪಾರವರು ಹೊಸ ಹೊಸ ಶಿಕ್ಷಣ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪೂರಕವಾಗಿವೆ, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆ ನೀಧುತ್ತವೆ. ಮೌಲ್ಯಮಾಪನಗಳು ಪಾರದರ್ಶಕತೆಯಿಂದ ಕೂಡಿದ್ದು ಮಕ್ಕಳಲ್ಲಿ ಹುಮ್ಮಸ್ಸು ಹೆಚ್ಚಿಸುವಂತಾಗಲಿ ಎಂದು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ, ಉಪಾಧ್ಯಕ್ಷ ನಿಶಾಂತ್ ರೈ, ಸದಸ್ಯರಾದ ರಾಮಚಂದ್ರ ಪ್ರಭು, ಜನಾರ್ಧನ ನಾರುಕೋಡಿ, ಜಯಂತಿ, ಪದ್ಮಾವತಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಂಜೀವ ಮೂಲ್ಯ, ನಿಕಟ ಪೂರ್ವ ಸ.ಸಂ.ವ್ಯಕ್ತಿ ಉದಯಕುಮಾರ್, ಶಿ.ಸಂ.ಪ್ರತಿನಿಧಿ ಸಂತೋಷ್ ರವರು ಹಾಗೂ ಎರಡೂ ಕ್ಲಸ್ಟರ್‍ನ 25 ಶಾಲೆಗಳ ಶಿಕ್ಷಕರು ಹಾಗೂ ಸುಮಾರು 350 ವಿದ್ಯಾರ್ಥಿಗಳು ಭಾಗವಹಿಸಿದರು. ಮುಖ್ಯ ಶಿಕ್ಷಕರಾದ ನಾರಾಯಣ ಪೂಜಾರಿ ಸ್ವಾಗತಿಸಿ ಸ.ಸಂ.ವ್ಯಕ್ತಿ ಆರತಿ ಧನ್ಯವಾದ ವಿತ್ತರು, ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ಶಕುಂತಲಾ, ಸಿಸಿಲಿಯಾ, ಜ್ಯೋತಿ, ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಸಹಕರಿಸಿದರು.

By Suddi9

Leave a Reply

Your email address will not be published. Required fields are marked *