ಬಂಟ್ವಾಳ : ತಾಲೂಕಿನ ಬಿ.ಸಿ.ರೋಡು ಸಮೀಪದ ಪಲ್ಲಮಜಲು ಬದ್ರಿಯಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಹಾಜಿ ಕೆ.ಎಸ್. ಅಬೂಬಕ್ಕರ್ ಅವರು ಪುನರಾಯ್ಕೆಯಾಗಿದ್ದಾರೆ. ಮಸೀದಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಹಾಜಿ ಸಿ.ಕೆ. ಸೂಫಿ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಪಿ.ಎಂ. ಇಸಾಕ್, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಶರೀಫ್, ಜೊತೆ ಕಾರ್ಯಾದರ್ಶಿಗಳಾಗಿ ಪಿ.ಸಿ. ಮುಹಮ್ಮದ್ ಹಾಗೂ ಎ.ಎಚ್. ಅಬ್ದುಲ್ ರಹಿಮಾನ್, ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಉಷಾ ಅವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೇಕಬ್ಬ, ಹಾಜಿ ಶಾಹುಲ್ ಹಮೀದ್, ಪಿ.ಎಂ. ಆದಂ, ಅಬ್ದುಲ್ ರಹಿಮಾನ್, ಜಬ್ಬಾರ್, ಮುಹಮ್ಮದ್, ಅಬ್ದುಲ್ ಅಝೀಝ್, ಇಸ್ಮಾಯಿಲ್ ಕೊಳಂಬೆ, ಅಬ್ದುಲ್ ಜಬ್ಬಾರ್, ಹಿದಾಯತ್, ಫಾರೂಕ್, ಸಂಶುದ್ದೀನ್ ಫಯಾಝ್, ಇಕ್ಬಾಲ್, ಮುಹಮ್ಮದ್ ರಫೀಕ್ ಅವರನ್ನು ನೇಮಿಸಲಾಯಿತು.
