ಬಂಟ್ವಾಳ : ಬ್ರದರ್ಸ್ ಅಗ್ರಹಾರ ಕ್ರಿಕೆಟರ್ಸ್ ಅಗ್ರಹಾರ ಇದರ ಆಶ್ರಯದಲ್ಲಿ 7 ಜನರ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಇತ್ತೀಚೆಗೆ ನಾವೂರು ಬೀದಿ ಸಮೀಪದ ಶ್ರೀ ವಿಷ್ಣಯಮೂರ್ತಿ ದೇವಸ್ಥಾನ ಬಳಿಯ ಮೈದಾನದಲ್ಲಿ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪಂದ್ಯಾಟ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿಯೂಸ್ ಎಲ್. ರೋಡ್ರಿಗಸ್, ಉದ್ಯಮಿ ಹಂಝ ಬಸ್ತಿಕೋಡಿ, ಪತ್ರಕರ್ತರಾದ ಲತೀಫ್ ನೇರಳಕಟ್ಟೆ, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಎ.ಕೆ., ಉದ್ಯಮಿ ರಾಜೇಶ್ ಹೆಗ್ಡೆ, ಕೆಎಸ್ಆರ್ಟಿಸಿ ಬಿ.ಸಿ.ರೋಡು ಘಟಕದ ಮ್ಯಾನೇಜರ್ ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದ್ದರು.

ಗೋಳ್ತಮಜಲು ತಂಡಕ್ಕೆ ಪ್ರಶಸ್ತಿ
64 ತಂಡಗಳು ಭಾಗವಹಿಸಿದ್ದ ಈ ಕ್ರಿಕಟ್ ಪಂದ್ಯಾವಳಿಯಲ್ಲಿ ಫ್ರೆಂಡ್ಸ್ ಗೋಳ್ತಮಜಲು ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಕೊರಗಜ್ಜ ಫ್ರೆಂಡ್ಸ್ ಚೆಂಡ್ತಿಮಾರು ತಂಡ ರನ್ನರ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ಚಕ್ರವರ್ತಿ ಕನ್ಯಾನ ಹಾಗೂ ಸಿಕ್ಸರ್ ಬೋಳಿಯಾರ್ ತಂಡಗಳು ಕ್ರಮವಾಗಿ ತೃತೀಯ ಹಾಗೂ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
