ಬಂಟ್ವಾಳ: ಕಾಳಧನಿಕರಿಗೆ ಪ್ರಧಾನಮಂತ್ರಿ ಸಹಕಾರ ನೀಡುತ್ತಿದ್ದಾರೆ. ಅವರೊಬ್ಬ ಸರ್ವಾಧಿಕಾರಿಯಾಗಿದ್ದು ಉದ್ಯಮಿಗಳ ಪರವಾಗಿದ್ದಾರೆ. ಇದರಿಂದಾಗಿ ಭಾರತ ತೀವ್ರ ತೊಂದರೆಯಲ್ಲಿ ಸಿಲುಕಿದೆ ಎಂದು ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಹೇಳಿದರು.ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಬಿ.ಸಿ.ರೋಡ್ ನಲ್ಲಿ ಮಂಗಳವಾರ ಸಂಜೆ ನಡೆದ ಪ್ರತಿಭಟನಾ ಸಭೆ ಕರಾಳ ದಿನ ಆಚರಣೆ ಸಂದರ್ಭ ಅವರು ಮಾತನಾಡಿ, ಕೇಂದ್ರ ನೀತಿ ಬಡವರ ವಿರೋಧಿಯಾಗಿದೆ ಎಂದು ಟೀಕಿಸಿದರು.

31-bh-sdpi protest (1)
ಪ್ರಧಾನಮಂತ್ರಿ ಅವರು ಮರಳುಮಾಡುವ ಮಾತಿನ ಮೋಡಿಗಾರರಷ್ಟೇ. ಪ್ರತಿಯೊಂದು ಯೋಜನೆಗಳೂ ಉದ್ಯಮಿಗಳ ಪರವಾಗಿದೆ. ನಯವಂಚಕ ಪ್ರಧಾನಿ ವಿದೇಶ ಸುತ್ತಿ ಬಂದಾಗಲೆಲ್ಲಾ ಯಾವುದಾದರೊಂದು ಉದ್ಯಮದ ಸುದ್ದಿ ಕೇಳಿಬರುತ್ತದೆ. ಬಡವರು ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಉದ್ಯಮಿಗಳು ಲಾಭ ಮಾಡಿಕೊಳ್ಳುತ್ತಾರೆ ಎಂದು ಆಪಾದಿಸಿದರು.
ಎಸ್ ಡಿಪಿಐ ಬಂಟ್ವಾಳ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಮೂಲ್ಕಿ ಘಟಕ ಅಧ್ಯಕ್ಷ ಅಶ್ರಫ್ ಎ.ಕೆ., ಸಜಿಪ ಗ್ರಾಪಂ ಅಧ್ಯಕ್ಷ ನಸೀರ್ ಸಜಿಪ, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಂಚಿ, ಎಸ್ ಡಿಟಿಯು ಜಿಲ್ಲಾಧ್ಯಕ್ಷ ಯೂಸೂಫ್ ಆಲಡ್ಕ, ಪುರಸಭಾ ಸದಸ್ಯ ಮುನೀಶ್ ಆಲಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅನ್ವರ್ ಸಾದತ್, ಜಿಲ್ಲಾ ಕಾರ್ಯದರ್ಶಿ ನವಾಜ್ ಉಳ್ಳಾಲ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಇಸ್ಮಾಯಿಲ್ ಬಾವ ಸ್ವಾಗತಿಸಿದರು. ರಿಯಾಜ್ ಕಡಂಬು ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *