ಕೈಕಂಬ: ಸೌಭಾಗ್ಯ ಮಿತ್ರ ಮಂಡಳಿ ಮೂಡುಕೆರೆ ಕಂದಾವರ ಇದರ 4ನೇ ವಾರ್ಷಿಕೋತ್ಸವ ಮೂಡುಕೆರೆ ಸೌಭಾಗ್ಯ ಮಿತ್ರ ಮಂಡಳಿಯ ವಠಾರದಲ್ಲಿ ಜರುಗಿತು. ಬೆಳಿಗ್ಗೆ ಭಾರತಾ ಮಾತಾ ಪೂಜನಾ ಕಾರ್ಯಕ್ರಮ ನಂತರ ಭಜನೆ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ವಿಶೇಷ ಚೇತನ ಮಗುವಾದ ತಶ್ವಿಕ್ ಇವನಿಗೆ ಧನ ಸಹಾಯ ವಿತರಿಸಲಾಯಿತು. ಉದ್ಯಮಿ ಗೌತಮ್ ನೊರ್ಹೊನ್ನಾ ಅವರ ತೀರ್ಥ ರೂಪರಾದ ದಿ.ಜೆ.ಎಸ್ ನೊರ್ಹೊನ್ನಾರ ಸ್ಮರಣಾರ್ಥವಾಗಿ ಸೌಭಾಗ್ಯ ಮಿತ್ರ ಮಂಡಳಿಗೆ ನೀಡಿದ ಧನ ಸಹಾಯದ ಸಹಕಾರದಿಂದ ಚೆಕ್ಕನ್ನು ತಶ್ವಿಕ್ ಅವರ ತಾಯಿ ಸುಶೀಲಾ ಅವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಗೌತಮ್ ನೊರ್ಹೊನ್ನಾ, ಹಿರಿಯರಾದ ದೇವದಾಸ್ ನಾಯ್ಕ್, ಸೌಭಾಗ್ಯ ಮಿತ್ರ ಮಂಡಳಿಯ ಅಧ್ಯಕ್ಷ ವಿವೇಕ್ ಶೆಟ್ಟಿ, ಮಾಜಿ ತಾ.ಪಂ ಸದಸ್ಯರಾದ ಕೇಶವ ಭಂಡಾರಿ, ಮತ್ತು ಮಿತ್ರಮಂಡಳಿಯ ಪದಾಧಿಕಾರಿಗಳು, ಸರ್ವಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಸೌಭಾಗ್ಯ ಮಿತ್ರ ಮಂಡಳಿಯ ಸದಸ್ಯರಾದ ಸತೀಶ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

