ಕೈಕಂಬ: ಈಗ ಏನಿದ್ದರೂ ಫೇಸ್‍ಬುಕ್, ವಾಟ್ಸಾಪ್ ಯುಗ. ಇದರಿಂದ ನಾವು ಧರ್ಮ ಸಂಸ್ಕೃತಿಯನ್ನು ಮರೆತು ಬಿಟ್ಟಿದ್ದೇವೆ. ಈಗಿನ ಜನರು ಪೂಜಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಬಹಳ ಕಡಿಮೆಯಾಗಿದೆ. ಹಾಗಾಗಿ ಹೆತ್ತವರು ತನ್ನ ಮನೆಯಲ್ಲಿ ಸಣ್ಣಮಕ್ಕಳಿರುವಾಗಲೇ ಧರ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು ನುಡಿದರು.

2

ಇವರು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ ಜರುಗಿದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸುವುದರ ಮೂಲಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

1

ಈ ವ್ಯಾಯಾಮ ಶಾಲೆಯು ಮಕ್ಕಳಿಗೆ ವ್ಯಾಯಾಮ, ಧರ್ಮ ಸಂಸ್ಕೃತಿಯ ಬಗ್ಗೆ ಅರಿವು ಹೀಗೆ ಹಲವು ರೀತಿಯ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಇನ್ನೂ ಮುಂದಕ್ಕೆ ಇಂತಹ ಒಳ್ಳೆಯ ಕೆಲಸಗಳಲ್ಲಿ ಭಾಗಿಯಾಗಿ ಎತ್ತರಕ್ಕೆ ಬೆಳೆಯಲಿ, ಹಾಗೂ ನಾವು ಯಾವಾಗಲೂ ನಿಮ್ಮೊಂದಿಗೆ ನಿಮ್ಮ ಜೊತೆ ಇರುತ್ತೇವೆ ಎಂದು ಶುಭಾರೈಸಿದರು.

3

ಶ್ರೀ ರಾಮಾಂಜನೇಯ ಶಾಲೆ ಬಡಮಕ್ಕಳಿಗೆ ಟ್ಯೂಷನ್ ಕೊಡುವ ಹಾಗೂ ಸಣ್ಣ ಮಕ್ಕಳಿಗೆ ವ್ಯಾಯಾಮ, ಸಂಸ್ಕೃತಿ, ಭಜನೆ ಹಾಗೂ ಬಡಕುಟುಂಬಗಳಿಗೆ ಸಹಾಯವನ್ನು ಮಾಡುವ ಮೂಲಕ ಬೆಳೆಯುತ್ತಿದೆ ಎಂದು ಶಿಕ್ಷಕ ಶರತ್ ಕುಮಾರ್ ಅಮೀನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವ್ಯಾಯಾಮ ಶಾಲೆಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ಗ್ರಾ.ಪಂ ಸದಸ್ಯರಾದ ಕೃಷ್ಣ ಅಡ್ಯಾರುಪದವು, ಮಾಜಿ ಸದಸ್ಯ ಅಶೋಕ್ ಸುವರ್ಣ, ರಾಮಾಂಜನೇಯ ಮಹಿಳಾ ಘಟಕ ಪದಾಧಿಕಾರಿಗಳಾದ ವೇದಾವತಿ, ಸುಶೀಲ, ಹಾಗೂ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *