ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತ ವಾಗಲಿರುವ ಸಂಸ್ಕೃತ ಉಪನ್ಯಾಸಕ ಗೋವಿಂದ ಭಟ್ ಮತ್ತು ಇಂಗಿಷ್ ಉಪನ್ಯಾಸಕ ರಘುವೀರ ರವರ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್ ಪ್ರಾಂಶುಪಾಲ ಆದರ್ಶ ಎ ಎಸ್, ಉಪನ್ಯಾಸಕರು ಮತ್ತು ಮಕ್ಕಳು ಭಾಗವಹಿಸಿದ್ದರು.

