ಮೂಡುಬಿದಿರೆ: ಚೆನೈನ ಅಣ್ಣಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೊಯಮತ್ತೂರಿನಲ್ಲಿ ಮುಕ್ತಾಯಗೊಂಡ 77ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್‍ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಮಗ್ರ ಚಾಂಪಿಯನ್‍ಶಿಪ್ ಬರುವಲ್ಲಿ ಮೂಡುಬಿದಿರೆ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ ಸ್ಮರಣೀಯ. ಅಖಿಲ ಭಾರತ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್‍ನ ಇತಿಹಾಸದಲ್ಲಿ ಕಾಲೇಜೊಂದರ ಕ್ರೀಡಾಪಟುಗಳ ಈ ಸ್ಮರಣೀಯ ಸಾಧನೆಯೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ದಾಖಲೆಯ 178 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ ಶಿಪ್ ಗೆದ್ದುಕೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

sreejith 1

hari 1

ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ 64 ಕ್ರೀಡಾಪಟುಗಳಲ್ಲಿ ಆಳ್ವಾಸ್‍ನ 55 ಮಂದಿ ಕ್ರೀಡಾಪಟುಗಳು.ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ದೊರೆತ 12 ಚಿನ್ನ, 8 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಆಳ್ವಾಸ್ ಕ್ರೀಡಾಪಟುಗಳೇ ಪಡೆದಿರುವುದು ಗಮನಾರ್ಹ ಎಂದರು.

dharun 1

ಆಳ್ವಾಸ್ ಕ್ರೀಡಾಪಟುಗಳಿಂದ ಮೂರು ಕೂಟ ದಾಖಲೆ:
ಈ ಕೂಟದಲ್ಲಿ ಆಳ್ವಾಸ್‍ನ 3 ಕ್ರೀಡಾಪಟುಗಳಿಂದ ಅಖಿಲ ಭಾರತ ವಿಶ್ವವಿದ್ಯಾನಿಲಯದ ಕೂಟ ದಾಖಲೆ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು. ಆಳ್ವಾಸ್‍ನ ಕ್ರೀಡಾಪಟುಗಳಾದ ಧಾರುಣ್ – (ಒಲಂಪಿಯನ್) 400 ಮೀಟರ್ ಹರ್ಡಲ್ಸ್, ಶ್ರೀಜೀತ್ – ತ್ರಿಪಲ್ ಜಂಪ್, ಹರಿಭಕ್ಷ್ – 3,000 ಮೀ ಸ್ಟೀಪಲ್‍ಚೇಸ್‍ನಲ್ಲಿ ಕೂಟ ದಾಖಲೆಯನ್ನು ಮಾಡಿದ್ದಾರೆ. ಒಲಂಪಿಯನ್ ಧಾರುಣ್‍ಗೆ ಕೂಟದ ಶ್ರೇಷ್ಠ ಅಥ್ಲೀಟ್ ಪ್ರಶಸ್ತಿ ಪಡೆದಿದ್ದಾರೆ.

ಕೊಯಮತ್ತೂರಿನಲ್ಲಿ ಆಳ್ವಾಸ್‍ನಿಂದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಕ್ರೀಡಾಪಟುಗಳಿಗೆ ವಸತಿಗೃಹವನ್ನು ಕಲ್ಪಿಸಲಾಗಿತ್ತು. ದ.ಕ.ಜಿಲ್ಲೆಯ ಅಡುಗೆ ಪರಿಣತರಿಂದ ಎಲ್ಲಾ 8 ದಿವಸಗಳ ಕಾಲ ವಿಶೇಷ ಊಟೋಪಚಾರದ ವ್ಯವಸ್ಥೆ. ವಸತಿಗೃಹ ಹಾಗೂ ಕ್ರೀಡಾಂಗಣಕ್ಕೆ ವಾಹನದ ಸೌಲಭ್ಯ, ಆಳ್ವಾಸ್ ಫಿಸಿಯೋಥೇರಪಿಯ 4 ತಜ್ಞ ವೈದ್ಯರಿಂದ ವಿಶ್ವವಿದ್ಯಾನಿಲಯದ ಎಲ್ಲಾ ಕ್ರೀಡಾಪಟುಗಳಿಗೆ ವೈದ್ಯಕೀಯ ಸೇವೆ ಸಹಿತ ಕ್ರೀಡಾಪಟುಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಿ ಆಳ್ವಾಸ್ ಪ್ರೋತ್ಸಾಹಿಸಿದೆ ಎಂದು ಡಾ. ಮೋಹನ ಆಳ್ವ ತಿಳಿಸಿದರು.

ಆಳ್ವಾಸ್ ಸಾಧನೆಯ ಮೈಲುಗಲ್ಲುಗಳು.
* 1984ರಲ್ಲಿ ಡಾ.ಎಂ.ಮೋಹನ್ ಆಳ್ವರಿಂದ ಏಕಲವ್ಯ ಕ್ರೀಡಾ ಸಂಸ್ಥೆ ಆರಂಭ.
* 1995-96ರಿಂದ ಆಳ್ವಾಸ್ ವಿದ್ಯಾಸಂಸ್ಥೆಗಳ ಮುಖಾಂತರ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣದಡಿಯಲ್ಲಿ ಕ್ರೀಡಾ ತರಭೇತಿ ಆರಂಭ.
* 2001-02ರಿಂದ ಅಖಿಲ ಭಾರತ ವಿಶ್ವವಿದ್ಯಾನಿಲಯ ಕ್ರೀಡಾಕೂಟದ ಚಾಂಪಿಯನ್‍ಶಿಪ್‍ಗಾಗಿ ಪೂರ್ವ ತಯಾರಿ.
* 2011ರಲ್ಲಿ 72ನೇ ಹಾಗೂ 2014ರಲ್ಲಿ 75ನೇ ಅಖಿಲ ಭಾರತ ವಿಶ್ವವಿದ್ಯಾನಿಲಯ ಅಥ್ಲೆಟಿಕ್ಸ್‍ನ ಯಶಸ್ವಿ ಅಯೋಜನೆ.
* 77ನೇ ಅಖಿಲಭಾರತ ವಿಶ್ವವಿದ್ಯಾನಿಲಯ ಅಥ್ಲೇಟಿಕ್ಸ್‍ನಲ್ಲಿ ಸಾಧನೆ.
* 77 ವರ್ಷಗಳ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಗಳಿಸಿದ 178 ಅಂಕಗಳ ಹೊಸ ದಾಖಲೆ.
* ಆಳ್ವಾಸ್‍ನ 8 ಮಂದಿ ಕ್ರೀಡಾಪಟುಗಳು ಈಗಾಗಲೇ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ  ಕ್ರೀಡಾಕೂಟಕ್ಕೆ ನಿಗದಿಯಾಗಿರುವ ಅರ್ಹತಾ ಮಟ್ಟವನ್ನು ಕ್ರಮಿಸಿದ್ದು ವಿಶೇಷ ಸಾಧನೆ.

By suddi9

Leave a Reply

Your email address will not be published. Required fields are marked *