ಮೂಡುಬಿದಿರೆ: ಜನನಿ ಸೇವಾ ಟ್ರಸ್ಟ್ ಸುಭಾಸ್‍ನಗರದ ವತಿಯಿಂದ ವಿಕಲಚೇತನ ಮಕ್ಕಳಿಗೆ ತಲಾ ಐದು ಸಾವಿರ ಆರ್ಥಿಕ ನೆರವು, ವಯೋವೃದ್ಧರಿಗೆ ಐವತ್ತು ಕೆ.ಜಿ ಅಕ್ಕಿ ವಿತರಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ, ಪುರಸಭಾ ಸದಸ್ಯ ರತ್ನಾಕರ ದೇವಾಡಿಗ ಟ್ರಸ್ಟ್‍ನ ಅಧ್ಯಕ್ಷ ನವೀನ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಆಚಾರ್ಯ, ಕೋಶಾಧಿಕಾರಿ ರಾಘವೇಂದ್ರ ಭಂಡಾರಿ, ಕಾರ್ಯದರ್ಶಿ ವಸಂತ ಕೋಟ್ಯಾನ್, ಟ್ರಸ್ಟಿಗಳಾದ ಗೋಪಾಲ ಶೆಟ್ಟಿಗಾರ, ಹರೀಶ್ ಸುವರ್ಣ, ಜನಾರ್ರ್ದನ, ಸತೀಶ್ ದೇವಾಡಿಗ, ಹೇಮಚಂದ್ರ, ಅಚ್ಯುತ, ದೀಪಕ್ ಕೋಟ್ಯಾನ್, ಪ್ರಸಾದ್ ಉಪಸ್ಥಿತರಿದದ್ದರು.


