ಬಂಟ್ವಾಳ : ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ರಿ. ಎಡನೀರು ಕಾಸರಗೋಡು ಇವರಿಂದ ತಾ. 04-02-2017 ರಿಂದ 10-02-2017ರ ವರೆಗೆ ಜರಗುವ ಯಕ್ಷಗಾನ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಮೆಲ್ಕಾರ್ ಆರ್.ಕೆ.ಎಂಟರ್ ಪ್ರೈಸಸ್ ನ ಆವರಣದಲ್ಲಿ ಮಾಜಿ ಜಿ.ಪಂ. ಸದಸ್ಯ ಎ.ಸಿ.ಭಂಡಾರಿ ನೆರವೇರಿಸಿದರು. ಬಂಟ್ವಾಳ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋಹನ್ ರಾವ್, ಅಧ್ಯಕ್ಷ ಕೈಯೂರು ನಾರಾಯಣ ಭಟ್, ಉಪಾಧ್ಯಕ್ಷ ಗಂಗಾಧರ್ ಭಟ್ ಕೊಳಕೆ, ಸೀತಾರಾಮ ಶೆಟ್ಟಿ ಸಿ.ಎಚ್., ಪ್ರಧಾನ ಕಾರ್ಯದರ್ಶಿ ಗಳಾದ ಎನ್.ಶಿವಶಂಕರ್, ಬಿ.ತಮ್ಮಯ್ಯ, ರಾಮ್ ಗಣೇಶ್ ಪ್ರಭು , ಸದಸ್ಯರಾದ ಕೃಷ್ಣ ಶರ್ಮ, ಮುರಳೀಧರ ರಾವ್ ಉಪಸ್ಥಿತರಿದ್ದರು.

