ಬಂಟ್ವಾಳ : ಜಿ.ಪಂ.ಸದಸ್ಯರ 2.00ಲಕ್ಷ ಅನುದಾನದಲ್ಲಿ ತುಂಬೆ ಗ್ರಾಮದ ವಳವೂರು ಉಮನಗುಡ್ಡೆ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಯ ಕಾಂಕ್ರಿಟೀಕರಣದ ಕಾಮಗಾರಿಗೆ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಗುದ್ದಲಿ ಪೂಜೆ ನೆರವೇರಿಸಿದರು. ತಾ.ಪಂ.ಸದಸ್ಯ ಗಣೇಶ್ ಸುವರ್ಣ , ಸ್ಥಳದಾನಿಗಳಾದ ಸಂತೋಷ್ ರೈ ವಳವೂರುಗುತ್ತು , ದಿಲೀಪ್ ರೈ ವಳವೂರುಗುತ್ತು , ಪಂ.ಸದಸ್ಯರಾದ ಸಂಜೀವ ಪೂಜಾರಿ , ಮನೋಹರ ಕೊಟ್ಟಾರಿ, ಪ್ರಶಾಂತ್ ಕೊಟ್ಟಾರಿ, ದೂಮ ವಳವೂರು, ಗುತ್ತಿಗೆದಾರ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

