ಮೂಡುಬಿದಿರೆ: ಮೂರು ದಿನಗಳಲ್ಲಿ ನೂರಾರು ಕಲಾವಿದರಿಗೆ ವೇದಿಕೆಯಾಗಿ ಸಹಸ್ರಾರು ಪ್ರೇಕ್ಷಕರ ಮನೋಲ್ಲಾಸಕ್ಕೆ ಕಾರಣ, ಪ್ರೇರಣೆಯಾದ ಇಪ್ಪತ್ತಮೂರನೇ ಆಳ್ವಾಸ್ ವಿರಾಸತ್ ಭಾನುವಾರ ಗಾನ-ನೃತ್ಯ ವೈಭವದೊಂದಿಗೆ ವರ್ಣರಂಜಿತವಾಗಿ ತೆರೆ ಕಂಡಿದೆ.

mohamn 2

ಮೂಡುಬಿದಿರೆ-ವಿದ್ಯಾಗಿರಿ ಸಮೀಪದ ಪುತ್ತಿಗೆಪದವಿನ ವಿವೇಕಾನಂದ ಆಳ್ವಾಸ್ ಆವರಣದಲ್ಲಿ ಮೂರು ಸಂಜೆ ನಾದ-ನೃತ್ಯಗಳದ್ದೇ ದರ್ಬಾರು. ಕಳೆದ ಎರಡು ದಶಕಗಳಲ್ಲಿ ಪ್ರೇಕ್ಷಕರನ ಮನಸ್ಸಿನಲ್ಲಿ ವಿಶಿಷ್ಟ ರೀತಿಯಲ್ಲಿ ಅಚ್ಚೊತ್ತಿದ್ದ ವಿರಾಸತ್ ಇನ್ನೆರಡು ವರ್ಷದಲ್ಲಿ ಬೆಳ್ಳಿ ಹಬ್ಬದತ್ತ ಸಾಗಲು ಇಪ್ಪತ್ತಮೂರನೇ ವಿರಾಸತ್ ಮುನ್ನುಡಿ ಬರೆಯಿತು. ಕಲೆ, ನೃತ್ಯ, ಸಂಗೀತಗಳಿಂದ ಪ್ರದಾನವಾಗಿರುವ ಆಳ್ವಾಸ್ ವಿರಾಸತ್ ಮೂರು ದಿನಗಳಲ್ಲಿ ಒಟ್ಟಾರೆ 13 ಗಂಟೆಯ ಸಾಂಸ್ಕøತಿಕ ವೈವಿಧ್ಯ, ಬರೋಬ್ಬರಿ 625 ರಷ್ಟು ಕಲಾವಿದರು ವೇದಿಕೆಯಲ್ಲಿ ಕಾಣಿಸಿಕೊಂಡರು.

ನವ ಉಲ್ಲಾಸ ನೀಡಿದ ಯುವ ವಿರಾಸತ್:
ಕಳೆದ 22 ವರ್ಷಗಳಲ್ಲಿ ರಾಷ್ಟ್ರಮಟ್ಟದ ನೃತ್ಯ ಕಲಾವಿದರು ಸಾಂಸ್ಕøತಿಕ ವೈವಿದ್ಯಗಳನ್ನು ನಡೆಸಿಕೊಂಡು ಬಂದರೇ ಈ ಬಾರಿ ಆಳ್ವಾಸ್ ವಿದ್ಯಾರ್ಥಿ ಕಲಾವಿದರ ಅಪೂರ್ವ ನೃತ್ಯ ವೈಭವದಿಂದಲೇ ಗಮನಸೆಳೆಯಿತು. 600ಕ್ಕೂ ಅಧಿಕ ಆಳ್ವಾಸ್‍ನ ಸಾಂಸ್ಕøತಿಕ ತಂಡದ ಕಲಾವಿದರು ವಿವಿಧ ರಾಜ್ಯಗಳ ಅಪರೂಪದ ಕಲಾ ಪ್ರಕಾರಗಳಿಂದ ವೇದಿಕೆಯಲ್ಲಿ ವೃತ್ತಿಪರ ಕಲಾವಿದರಂತೆ ಕಾಣಿಸಿಕೊಂಡರು.

mohan

ತೆರೆ ಬೀಳುವ ಮೊದಲು…
ಬಾಲಿವುಡ್ ಗಾಯಕ ಶಾನ್ ಹಾಗೂ ಪಾಯಲ್ ದೇವ್ ಅವರ ಆರಂಭಗೊಂಡ ಸಂಗೀತ ರಸಸಂಜೆಯು ಸೇರಿದ ಜನಸ್ತೋಮವನ್ನು ಸಂಗೀತ ಲೋಕಕ್ಕೆ ಕರೆದೊಯ್ಯಿತು. ಎರಡನೇ ಕಾರ್ಯಕ್ರಮವಾಗಿ ಉಡುಪಿಯ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್‍ನ ಕು.ಗಾರ್ಗಿ, ಅರ್ಚನಾ ಮತ್ತು ಸಮನ್ವಿ ಅವರಿಂದ ಗಾನಾರ್ಚನ ಪ್ರಸ್ತುತಿಗೊಂಡಿತು.  ನಂತರ ಆಳ್ವಾಸ್ ವಿದ್ಯಾರ್ಥಿಗಳಿಂದ ನಡೆದ ನೃತ್ಯ ಸಂಭ್ರಮದಲ್ಲಿ ಚೆನ್ನೈನ ಶೀಲಾ ಉನ್ನಿಕೃಷ್ಣನ್ ನಿರ್ದೇಶನದಲ್ಲಿ 40 ವಿದ್ಯಾರ್ಥಿ ಕಲಾವಿದರಿಂದ ಭರತನಾಟ್ಯ-ಪುಷ್ಪಾಂಜಲಿ, ಪ್ರೀತಮ್ ಸಿಂಗ್ ನಿರ್ದೇಶನದಲ್ಲಿ 30 ವಿದ್ಯಾರ್ಥಿ ಕಲಾವಿದರಿಂದ ಮಣಿಪುರದ ಸ್ಟಿಕ್ ಡ್ಯಾನ್ಸ್ ಹಾಗೂ ಕೊಲಂಬೊ ಜಯಂಪತಿ ಭಂಡಾರ ನಿರ್ದೇಶನದಲ್ಲಿ 60 ವಿದ್ಯಾರ್ಥಿ ಕಲಾವಿದರಿಂದ ಶ್ರೀಲಂಕಾದ ಜನಪದ ನೃತ್ಯ ಅನಾವರಣಗೊಳ್ಳುವ ಮೂಲಕ ಮೂರು ದಿನಗಳ ಕಾಲ ನಡೆದ ಈ ವರ್ಷದ ಆಳ್ವಾಸ್ ವಿರಾಸತ್‍ಗೆ ತೆರೆ ಎಳೆಯಿತು.

* ಮೂರು ದಿನಗಳಲ್ಲಿ 13 ಗಂಟೆಯ ಸಾಂಸ್ಕೃತಿಕ ವೈವಿಧ್ಯ,
* 625 ರಷ್ಟು ಕಲಾವಿದರಿಗೆ ವೇದಿಕೆ
* ದೇಶಿ ಸಂಸ್ಕøತಿಯ ಅನಾವರಣ
* ಮೂಡುಬಿದಿರೆಯಲ್ಲೇ ನೆಲೆಸಿರುವ ಜರ್ಮನಿಯ ಪೀಟರ್, ಎಡ್ವಿನ್ ಸಹಿತ ವಿದೇಶಿ ಪ್ರೇಕ್ಷಕರು ಭಾಗಿ
* ವಿರಾಸತ್‍ನ ಮೂರು ದಿನ ವಿಶೇಷ ಡ್ರೆಸ್ ಕೋಡ್‍ನಲ್ಲಿ ಡಾ.ಎಂ ಮೋಹನ ಆಳ್ವ.

By Suddi9

Leave a Reply

Your email address will not be published. Required fields are marked *