ಮೂಡುಬಿದಿರೆ: ಬಾಳೆಹೊನ್ನೂರಿನಲ್ಲಿ ನಡೆದ 22ನೇಯ ರಾಜ್ಯಮಟ್ಟದ ಟಿ-20 ಬಾಳೆಹೊನ್ನೂರು ಕೆ.ಎಸ್.ಎ ಕಪ್ ಪಂದ್ಯಾಟದಲ್ಲಿ ಆಳ್ವಾಸ್ ತಂಡ ಗೆಲುವು ಸಾಧಿಸಿದೆ.

cricket

ಫೈನಲ್ ಪಂದ್ಯಾಟದಲ್ಲಿ ಬೆಂಗಳೂರಿನ ಸುನಿಲ್ ಇಲೆವೆನ್ ತಂಡವನ್ನು ಸೋಲಿಸಿ 4ನೇ ಬಾರಿಗೆ ಕೆ.ಎಸ್.ಎ ಕಪ್‍ನ್ನು ತನ್ನದಾಗಿಸಿದೆ. 2 ಇನ್ನಿಂಗ್ಸ್‍ನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಳ್ವಾಸ್ ತಂಡ 20 ಓವರಿಗೆ 178 ರನ್‍ಗಳನ್ನು ಕಲೆಹಾಕಿತು. ಇದಕ್ಕೆ ಉತ್ತರವಾಗಿ ಸುನಿಲ್ ತಂಡ 20 ಓವರಿನಲ್ಲಿ 140 ರನ್ ಪೇರಿಸಿತು. ದ್ವಿತೀಯ ಇನ್ನಿಂಗ್ಸ್‍ನಲ್ಲಿ ಆಳ್ವಾಸ್ ತಂಡ 164 ರನ್‍ಗಳನ್ನು ಗಳಿಸಿ ಸುನಿಲ್ ತಂಡಕ್ಕೆ 203 ರನ್‍ನ ಗುರಿಯನ್ನು ನೀಡಿತು ಇದಕ್ಕೆ ಉತ್ತರವಾಗಿ ಸುನಿಲ್ ತಂಡ 160 ಕಲೆಹಾಕಿತು. ಆಳ್ವಾಸ್‍ನ ರಕ್ಷಿತ್ ಉತ್ತಮ ಬ್ಯಾಟ್ಸ್‍ಮನ್ ಹಾಗೂ ಆಳ್ವಾಸ್‍ನ ಕೆ.ಎಸ್. ದೇವಯ್ಯ ಉತ್ತಮ ಬೌಲರ್ ಪ್ರಶಸ್ತಿಯನ್ನು ತನ್ನದಾಗಿಸಿತು.

By Suddi9

Leave a Reply

Your email address will not be published. Required fields are marked *