ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇಲ್ಲಿನ ಭಜನಾ ಮಂಡಳಿ ವತಿಯಿಂದ ಎಂಟನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಜ.9ರಂದು ಭಾನುವಾರ ಜರುಗಿತು. ಕ್ಷೇತ್ರದ ಅನುವಂಶಿಕ ಮೋಕ್ತೇಸರ ಸುಂದರ್ ಹೊಳ್ಳ ಬದನಡಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಗಂಗಾಧರ್ ಪೂಜಾರಿ ಪಿಲ್ಕಾಜೆ, ಗ್ರಾ.ಪಂ ಅಧ್ಯಕ್ಷ ದಯಾನಂದ ಸಪಲ್ಯ, ಸಂಚಾಲಕ ರವೀಂದ್ರ ಪೂಜಾರಿ ಬದನಡಿ, ಮಹಿಳಾ ಅಧ್ಯಕ್ಷೆ ಸತ್ಯ ದಾಮೋದರ್ ಉಪಸ್ಥಿತರಿದ್ದರು. ನಂತರ ಮಹಿಳಾ ತಂಡದ ಸದಸ್ಯರು ನೃತ್ಯ ಭಜನೆ ಪ್ರದರ್ಶಿಸಿದರು.


