ಬಂಟ್ವಾಳ : ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಕೊಳ್ನಾಡು ಗ್ರಾಮದ ರಾಜು ಭಂಡಾರಿ ಯವರ ಪತ್ನಿ ಶಕುಂತಳಾ ಭಂಡಾರಿಯವರ ವೈದ್ಯಕೀಯ ವೆಚ್ಚಕ್ಕಾಗಿ ಮಂಜೂರಾದ ರೂ.50,000(ಐವತ್ತು ಸಾವಿರ) ದ ಚೆಕ್ಕನ್ನು ಅವರ ಪುತ್ರನಿಗೆ ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್ , ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ,ಎಂ.ಎಸ್.ಮಹಮ್ಮದ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವೆ ಮಾವೆ, ವಿಶ್ವನಾಥ ಶೆಟ್ಟಿ ಪೆರ್ಲದಬೈಲು ಉಪಸ್ಥಿತರಿದ್ದರು.

