ಮುಂಬಯಿ: ಶಿಕ್ಷಣ ರಂಗದ ಮೇರು ಸಾಧಕಿ ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ, ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಅವರಿಗೆ ಪ್ರೈಡ್ ಆಫ್ ಇಂಡಿಯಾ ವುಮನ್ ಆಫ್ ದ ಇಯರ್ ಪುರಸ್ಕಾರ ಪ್ರಾಪ್ತಿಯಾಗಿದೆ.
ಶೈಕ್ಷಣಿಕ ಸೇವೆ, ಮಕ್ಕಳ ಕಲ್ಯಾಣಾಭಿವೃದ್ಧಿ ಮತ್ತು ಸಮಾಜ ಸೇವೆಯ ಅನನ್ಯ ಕೊಡುಗೆಗಾಗಿ ವರ್ಲ್ಡ್ ಕನ್ಸಲ್ಟಿಂಗ್ ಎಂಡ್ ರಿಸರ್ಚ್ ಕಾರ್ಪೋರೇಶನ್ ದ ಪ್ರೈಡ್ ಆಫ್ ಇಂಡಿಯಾ ಪ್ರಶಸ್ತಿಯನ್ನಾಗಿಸಿ ವಾರ್ಷಿಕವಾಗಿ ಪ್ರದಾನಿಸುವ ಪ್ರತಿಷ್ಠಿತ ಪುರಸ್ಕಾರವನ್ನು ಈ ಬಾರಿ ಮೇಡಂ ಗ್ರೇಸ್ ಪಿಂಟೋ ಅವರಿಗೆ ಪ್ರದಾನಿಸಿ ಗೌರವಿಸಿದೆ. ಕಳೆದ ಸೋಮವಾರ ನಗರದಲ್ಲಿ ನಡೆಸಲಾದ ಸಮಾರಂಭದಲ್ಲಿ ಲಂಡನ್ನ ಸಂಸದ (ಯುಕೆ) ಹಾಗೂ ಲೂಂಬಾ ಫೌಂಡೇಶನ್ನ ಸಂಸ್ಥಾಪಕ ಲಾರ್ಡ್ ರಾಜಾ ಲೂಂಬಾ ಪ್ರಶಸ್ತಿ ಪ್ರದಾನಿಸಿ ಮೇಡಂ ಪಿಂಟೋ ಅವರನ್ನು ಗೌರವಿಸಿ ಅಭಿನಂದಿಸಿದರು.

