ಬರ ಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ನವರು ಭೇಟಿ ಕೊಟ್ಟು ಖುದ್ದು ವೀಕ್ಷಣೆ ಮಾಡಿದಂತೆ ಯಡಿಯೂರಪ್ಪನವರು ಹಾಗು ಹಿರಿಯ ಬಿಜೆಪಿ ನಾಯಕರುಗಳು ನೇತ್ರಾವತಿ ನದಿಯ ಉದ್ದಕ್ಕೊ ಸಮೀಕ್ಷೆ ಮಾಡಬೇಕು ಅವರು ಈಗಾಗಲೇ ಕೋಲಾರದಲ್ಲಿ ಹೇಳಿರುವಂತೆ ದಕ್ಷಿಣ ಕನ್ನಡ ದ ನದಿ ತಟದ ಜನರ ಮೀನುಗಾರರ ಕೃಷಿಕರ ಹಾಗು ಹಿರಿಯ ತಜ್ಞರ ಜೊತೆ ಈ ನದಿ ಪ್ರದೇಶ ಗಳಲ್ಲಿ ಸಂಚರಿಸಿ ಜನರ ಅವಹಾಲು ಹಾಗು ಆಗುವ ತೊಂದರೆಗಳನ್ನ ಪರಿಶೀಲಿಸ ಬೇಕು ಆ ಬಳಿಕ ನಮ್ಮ ತುಡಿತ ನೋವನ್ನ ಅರ್ಥ ಮಾಡಿಕೊಳ್ಳಬೇಕು.
ಇದೇ ಮಾತನ್ನ ಸಿದ್ದರಾಮಯ್ಯ್ ನವರಿಗೆ ಹೋರಾಟ ಗಾರರು ಹತ್ತಾರು ಬಾರಿ ಹೇಳಿದರೂ ಕಿವಿಗೆ ಹಾಕಿ ಕೊಳ್ಳಲೇ ಇಲ್ಲ ಯಡ್ಯೂರಪ್ಪ ನವರು ಖುದ್ದು ಪ್ರವಾಸ ಕೈಗೊಂಡು ಈ ಬಾಗದ ಜನರ ಭಾವನೆ ಹಾಗು ಅನಿಸಿಕೆ ಗಳಿಗೆ ಕಿವಿ ಕೊಡಬೇಕು. ಇದು ಕನ್ನಡ ಕಟ್ಟೆ ಹಾಗು ಕರವೇ ಕರಾವಳಿಯ ಆಗ್ರಹ
ಡಾ ಅಣ್ಣಯ್ಯ ಕುಲಾಲ್ ಉಳ್ತೂರು
ಸಂಸ್ಥಾಪಕ ಅಧ್ಯಕ್ಷರು ಕನ್ನಡ ಕಟ್ಟೆ ಮಂಗಳೂರು

