ಮುಂಬಯಿ, ಡಿ.20: ತುಳು ಭಾಷೆಯ ಚಿತ್ರದಲ್ಲಿ ಅಭಿನಯಿಸಬೇಕೆಂಬ ಬಹುದಿನಗಳ ಆಸೆ ಅಂಬರ್ ಕೆಟರರ್ಸ್ ತುಳು ಚಿತ್ರದ ಮೂಲಕ ಈಡೇರಿದೆ. ಈ ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಜನತೆ ನೋಡಿ ಪ್ರೋತ್ಸಾಹಿಸಬೇಕು ಎಂದು ಖ್ಯಾತ ಚಿತ್ರನಟಿ ಭಾರತಿವಿಷ್ಣುವರ್ಧನ್ ಮನವಿ ಮಾಡಿದ್ದಾರೆ.

ಮಂಗಳವಾರ ಮಂಗಳೂರಿನಲ್ಲಿ ಅಂಬರ್ ಕೆಟರರ್ಸ್‍ನ ಅಂತಿಮ ಕೆಲವು ದೃಶ್ಯಗಳ ಚಿತ್ರೀಕರಣದ ವೇಳೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇತರ ಚಿತ್ರರಂಗದಂತೆ ತುಳು ಚಿತ್ರರಂಗ ಕೂಡ ಬೆಳವಣಿಗೆಯನ್ನು ಕಾಣುತ್ತಿದ್ದು, ಅನೇಕ ಮಂದಿ ಕಲಾವಿದರು ಬೆಳಕಿಗೆ ಬರುವಂತಾಗಿದೆ. ನನಗೂ ತುಳು ಭಾಷೆಯಲ್ಲಿ ನಟಿಸಬೇಕೆಂಬ ಆಸೆ ಇತ್ತು, ಅದೀಗ ಈಡೇರಿದೆ. ಮಂಗಳೂರಿನಲ್ಲಿ ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸುವ ಹೆಚ್ಚಿನ ಅಭಿಮಾನಿಗಳಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದವರು ಹೇಳಿದರು.

ambara-catrass-film-press-release-1

ambara-catrass-film-press-release-5

ambara-catrass-film-press-release-7

amber-caterers-press-meet-a1

amber-caterers-press-meet-a4

ambara-catrass-film-press-release-3

ಕನ್ನಡ ಚಿತ್ರರಂಗದ ಖ್ಯಾತ ನಟ ಶರತ್ ಲೋಹಿತಾಶ್ವ ಮಾತನಾಡಿ, ಭಾಷೆಗೆ ಭಾವನೆಯಷ್ಟೇ ಮುಖ್ಯ. ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಕೊಡುವ ಕೆಲಸವನ್ನು ಕಲಾವಿದ ಮಾಡಬೇಕು. ತುಳು ಭಾಷೆಯಲ್ಲಿ ಮೊದಲ ಬಾರಿಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ ಎಂದರು.

ಈಗಾಗಲೇ ಶೇ.80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಕೆಲವೊಂದು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಜನತೆ ಮೆಚ್ಚುವ ರೀತಿಯಲ್ಲಿ ಚಿತ್ರ ಹೊರಬರಲಿದೆ ಎಂದು ಅಂಬರ್ ಕೆಟರರ್ರ್ಸ್ ನಿರ್ದೇಶಕ ಜಯಪ್ರಸಾದ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕಡಂದಲೆ ಸುರೇಶ್ ಭಂಡಾರಿ, ನಾಯಕ ನಟ ಸೌರಭ್, ಚಿತ್ರದ ನಾಯಕಿ ಸಿಂಧು, ನವೀನ್ ಡಿ. ಪಡೀಲ್, ಕೌರವ್ ವೆಂಕಟೇಶ್, ಸುನೇತ್ರ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *