ಬಂಟ್ವಾಳ; ರಿಕ್ಷಾ ಚಾಲಕ, ಭಜರಂಗದಳ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣವನ್ನು ಗೃಹಸಚಿವ ಜಾಜರ್್ ಸಿಒಡಿ ತನಿಖೆಗೆೆ ವಹಿಸಿದ್ದಾರೆ. ಡಿವೈಎಫ್ಐ ಸೇರಿದಂತೆ ವಿವಿಧ ಸಂಘಟನೆಗಳು ಕಳೆದ ಎರಡು ತಿಂಗಳಿನಿಂದ ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದು ಸಕರ್ಾರ ಈ ಕ್ರಮಕ್ಕೆ ಮುಂದಾಗಿದೆ.

ರಿಕ್ಷಾ ಚಾಲಕ ಇಕ್ಬಾಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ರಾಜೇಶ್ ಪೂಜಾರಿಯನ್ನು ಕಳೆದ ಮಾ.21 ರ ಮುಂಜಾನೆ ತಂಡವೊಂದು ತಲವಾರಿನಿಂದ ಕಡಿದು ಕೊಲೆ ಗೈದಿತ್ತು. ಬಳಿಕ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಿತ್ತು. ಈ ಮಧ್ಯೆ ಕೊಲೆ ನಡೆದ ಸ್ಥಳದಲ್ಲಿ ದೊರೆತಿದ್ದ ಸಾಕ್ಷಿಗಳ ಆಧಾರದಲ್ಲಿ ಕಾಯರ್ಾಚರಣೆ ನಡೆಸಿದ ಪೋಲೀಸರು ಹುಸೈನ್, ಇಮ್ರಾನ್, ಇಷರ್ಾದ್ ಎಂಬವರನ್ನು ಬಂಧಿಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ಪೊಲೀಸರು ನಿರಪರಾಧಿಗಳನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಡಿವೈ ಎಫ್ ಐ ಹಾಗೂ ಪಿಎಫ್ ಐ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಲ್ಲದೆ, ನೈಜ ಆರೋಪಿಗಳ ಬಂಧನಕ್ಕೆ ಪ್ರಕರಣವನ್ನು ಸಿಓಡಿ ಗೆ ವಹಿಸುವಂತೆ ಆಗ್ರಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಯವರೂ ಕೂಡ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿಭರವಸೆ ನೀಡಿದ್ದರು. ಈ ನಡುವೆ ಕಳೆದ ಜೂನ್23 ರಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಯವರ ಮನೆ ಸಮೀಪ ಪ್ರತಿಭಟನೆ ನಡೆಸಿದ್ದ ಡಿವೈ ಎಫ್ ಐ ಸಂಘಟನೆ ಪ್ರಕರಣದ ಮರುತನಿಖೆಗೆ ಆಗ್ರಹಿಸಿದ್ದರು. ಈ ಎಲ್ಲಾ ಆಗ್ರಹಗಳ ಬೇಡಿಕೆಗೆ ಮಣಿದಿರುವ ರಾಜ್ಯ ಸಕರ್ಾರ ಪ್ರಕರಣವನ್ನು ಸಿಒಡಿಗೆ ವಹಿಸಿದೆ ಎಂದು ಹೇಳಲಾಗಿದೆ
