ಪೆರ್ಮಂಕಿ: ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯದ ಕುರಿತು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿಗಳು ನೀಡಿದ 3 ಲಕ್ಷ ರೂ. ದೇಣಿಗೆಯನ್ನು ಶ್ರೀ. ಕ್ಷೇ. ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಉಮರಬ್ಬ ಹಾಗೂ ಮೇಲ್ವಿಚಾರಕ ಕೃಷ್ಣಪ್ಪ ಅವರು ಡಿ.9ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೇತ್ರದ ಆಡಳಿತ ಮೋಕ್ತೇಸರಾದ ಲೋಕೇಶ್ ಮಾಡ, ಉಮಾನಾಥ ಬೆಳ್ಚಡ, ಪ್ರಮುಖರಾದ ಸುದರ್ಶನ ಶೆಟ್ಟಿ, ಗುಣಕರ ಸಾಲ್ಯಾನ್, ಯೋಜನೆಯ ಪೆರ್ಮಂಕಿ ಒಕ್ಕೂಟದ ಅಧ್ಯಕ್ಷೆ ರತ್ನಾ, ಸೇವಾ ಪ್ರತಿನಿಧಿ ರೋಶನಿ, ಮಾಜಿ ಅಧ್ಯಕ್ಷ ಶ್ರೀಧರ ಬೇಟೆಮಾರು, ಹರೀಶ್ ಕೊಲಂಬೆ ಮೊದಲಾದವರು ಉಪಸ್ಥಿತರಿದ್ದರು.

