ಮಂಗಳೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ದ.ಕ ಜಿಲ್ಲಾ ಸಮಿತಿಯ ವಿಶಾಲವಾದ ಕಾರ್ಯಾಲಯವನ್ನು ಬಿ.ಸಿ.ರೋಡಿನಲ್ಲಿರುವ ಭಾರತ್ ಬಿಲ್ಡಿಂಗ್ನಲ್ಲಿ ಇಂದು (ಗುರುವಾರ )ಎಸ್ ಎಸ್ ಎಫ್ ರಾಜ್ಯ ನಾಯಕರು ದ.ಕ ಜಿಲ್ಲಾದ್ಯಕ್ಷರೂ ಆದ ಹಾಫಿಳ್ ಯಾಕೂಬ್ ಸಅದಿ ನಾವೂರು ಉದ್ಘಾಟಿಸಿದರು.

ಜಿಲ್ಲಾ ಸಮಿತಿಯ ಬಹುದಿನಗಳ ಕನಸೊಂದು ನನಸಾದುದರಲ್ಲಿ ತುಂಬಾ ಸಂತೋಷವಿದ್ದು ಸಮುದಾಯ ಸೇವೆಯಲ್ಲಿ ಸದಾ ಅಭಯಕೇಂದ್ರವಾಗಲಿ ಎಂದು ಹಾರೈಸಿದರು . ಎಸ್ ಎಸ್ ಎಫ್ ನಿಕಟಪೂರ್ವ ಜಿಲ್ಲಾದ್ಯಕ್ಷ ಇಸ್ಮಾಯಿಲ್ ಸಅದಿ ಉರುಮಣೆ ದುವಾ ನೆರವೇರಿಸಿದರು. ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿದರು.

ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಕ್ಯಾಂಪಸ್ ಕಾರ್ಯದರ್ಶಿ ಆಸಿಫ್ ಕೃಷ್ಣಾಪುರ, ಕಾರ್ಯದರ್ಶಿಗಳಾದ ರಝಾಕ್ ಸಖಾಫಿ ಮಡಂತ್ಯಾರ್, ಕಲಂದರ್ ಪದ್ಮುಂಜ, ಶರೀಫ್ ಸಅದಿ ಕಿಲ್ಲೂರು, ಇಬ್ರಾಹಿಮ್ ಸಖಾಫಿ ಸೆರ್ಕಳ, ಅಡ್ವಕೆಟ್ ಶಾಕಿರ್ ಮಿತ್ತೂರು, ಕೆ.ಎಂ.ಎಚ್ ಝುಹ್ರಿ ಕೊಂಬಾಳಿ , ಇಸ್ಮಾಯಿಲ್ ಮಾಸ್ಟರ್ ಮಂಗಳಪದವು , ಶರೀಫ್ ಸಖಾಫಿ ಕುಪ್ಪೆಟ್ಟಿ, ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ, ಅಬ್ದುಲ್ ರಹಿಮಾನ್ ಸುಳ್ಯ , ಬದ್ರುದ್ದೀನ್ ಅಝ್ಹರಿ, ಇಕ್ಬಾಲ್ ಬಪ್ಪಳಿಗೆ , ಸಲೀಮ್ ಮುರ ಮುಂತಾದ ನಾಯಕರು ಉಪಸ್ಥಿತರಿದ್ದರು . ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಮೀರ್ ಸುಳ್ಯ ಸ್ವಾಗತಿಸಿ ಶರೀಫ್ ನಂದಾವರ ವಂದಿಸಿದರು.
