ಬಂಟ್ವಾಳ: ದ.ಕ ಜಿಲ್ಲೆಯ ಜೀವನದಿ ಎತ್ತಿನಹೊಳೆ ಯೋಜನೆ ವಿರುದ್ಧಈ ಹೋರಾಟದ ಪ್ರಯುಕ್ತ ದಿನಾಂಕ: 11ರಂದು ಬಂಟ್ವಾಳ ತಾಲೂಕಿಗೆ ಆಗಮಿಸುವ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಗೆ ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಬೆಂಬಲ ವ್ಯಕ್ತಪಡಿಸುತ್ತಿದೆ.

rath-yatra-jagannath

ಈ ಯೋಜನೆಅನುಷ್ಥಾನಗೊಂಡರೆಜಿಲ್ಲೆಯಲ್ಲಿ ಜಲ ಮತ್ತು ಪುಣ್ಯ ನೆಲಗಳು ಭತ್ತಿ ಬರಡಾಗಬಹುದು. ಜಿಲ್ಲೆಯ ಜನರ ಜೀವನ, ಪಶು ಪಕ್ಷಿಗಳಿಗೆ ಬದುಕಲು ತೊಂದರೆಯಾಗಬಹುದು. ಮತ್ತು ಅವಿಜ್ಞಾನಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸುವುದರ ವಿರುದ್ಧ ಈ ಹಿಂದೆಕೂಡಾ ಹೋರಾಟಕ್ಕೆ ಹಿಂದುಜಾಗರಣ ವೇದಿಕೆ ಬೆಂಬಲ ವ್ಯಕ್ತಪಡಿಸಿದ್ದು, ಇದೀಗ ನಡೆಯುವ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಗೆ ಬಂಟ್ವಾಳ ತಾಲೂಕಿನಾದ್ಯಂತ ಹಿಂದುಜಾಗರಣ ವೇದಿಕೆ ಬೆಂಬಲ ವ್ಯಕ್ತಪಡಿಸುತ್ತಿದೆಎಂದು ಹಿಂ.ಜಾ.ವೇ. ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರ ಕಲಾಯಿ ಹಾಗೂ ಸಂಚಾಲಕ ಪ್ರಶಾಂತ್‍ ಕೆಂಪುಗುಡ್ಡೆ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

By suddi9

Leave a Reply

Your email address will not be published. Required fields are marked *