ಬಂಟ್ವಾಳ: ಎತ್ತಿನಹಳ್ಳ ಎಂಬ ಪ್ರದೇಶವನ್ನು ಎತ್ತಿನಹೊಳೆ ಎಂದು ನಾಮಾಂಕಿತಗೊಳಿಸಿ ದ.ಕ ಜಿಲ್ಲೆಯನ್ನು ಬರಡು ಭೂಮಿಯಾನ್ನಾಗಿಸಲು, ನೇತ್ರಾವತಿ ತಿರುವು ಯೋಜನೆಗೆ ಚಾಲನೆ ನೀಡಿ ಈ ರಾಜ್ಯದ ಜನತೆಯ ಕೋಟಿ ಕೋಟ್ಯಾಂತರ ರೂಪಾೈ ತೆರಿಗೆ ಹಣವನ್ನು ಕೊಳ್ಳೆ ಹೊಡೆಯಲು ಕರ್ನಾಟಕದ ಜನ ವಿರೋಧಿ ಕಾಂಗ್ರೆಸ್ ಸರಕಾರದ ಈ ಯೋಜನೆಯ ವಿರುಧ್ಧ ಸಂಸದ ನಳಿನ್ ಕುಮಾರ್ ಕಟೀಲ್‍ರವರು ನೇತೃತ್ವದ ಪಕ್ಷಾತೀತ ಹೋರಾಟದ ಪಂಚ ತೀರ್ಥ- ಸಪ್ತ ಕ್ಷೇತ್ರ ರಥ ಯಾತ್ರೆಯು ಡಿ.11ರಂದು ಮಧ್ಯಾಹ್ನ 2.30 ಕ್ಕೆ ಕಲ್ಲಡ್ಕ ಹಾಗೂ 3.30 ಕ್ಕೆ ಬಿ.ಸಿ.ರೋಡ್ ಆಗಮಿಸಲಿದೆ.
ಈ ಯೋಜನೆಯಿಂದ ದ.ಕ ಜಿಲ್ಲೆಯ ಜನ ಕುಡಿಯಲು ಕೂಡ ನೀರಿಗಾಗಿ ಪರದಾಡುವ ಸಂಭವು ಸೃಷ್ಟಿಯಾಗುತ್ತದೆ. ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ವೈಭವವು ಸಂಪೂರ್ಣ ನಶಿಸಿ ಹೋಗುವ ಭೀತಿ ಎದುರಾಗುತ್ತದೆ. ಭತ್ತ, ತೆಂಗು, ಅಡಿಕೆ ಬೆಳೆಯನ್ನು ನಂಬಿರುವ ರೈತಾಪಿ ವರ್ಗ ,ಯಕ್ಷಗಾನ, ನಾಗಾರಾಧನೆ, ಭೂತಾರಾಧನೆಯಿಂದ ಭಾವನಾತ್ಮಕ ಜೀವನವನ್ನು ನಡೆಸುತ್ತಿರುವ ತುಳುನಾಡಿನ ಈ ಜನ ಮುಂದೊಂದು ದಿನ ಈ ಜಿಲ್ಲೆಯನ್ನು ತೊರೆದು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುವುಂದು ಖಂಡಿತ.
ಕುಮಾರಧಾರ, ನೇತ್ರಾವತಿ ,ಪಾಲ್ಗುಣಿ, ಶಾಂಭವಿ, ನಂದಿನಿ ಪರಮ ಪವಿತ್ರ ಪಂಚ ನದಿಗಳ ಜಲದೊಂದಿಗೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಪ್ಪಿನಂಗಡಿ, ಪೊಳಲಿ, ಕದ್ರಿ, ಬಪ್ಪನಾಡು, ಕಟೀಲು ಪುಣ್ಯ ಸಾನಿಧ್ಯಗಳನ್ನು ಸಂಪರ್ಕಿಸುವ ಈ ರಥವು ಬಂಟ್ವಾಳ ತಾಲೂಕಿನ ಕಲ್ಲಡ್ಕ ಹಾಗೂ ಬಿ,ಸಿ.ರೋಡಿಗೆ ಆಗಮಿಸುವ ಸಂದರ್ಭದಲ್ಲಿ ಜಾತಿ, ಮತ, ಪಕ್ಷಭೇದ ಮರೆತು ಈ ಹೋರಾಟದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೋಳುವ ಮೂಲಕ ಕರ್ನಾಟಕದ ಕಾಂಗ್ರೇಸ್ ಸರಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸೋಣ ಎಂಬ ಕಳಕಳಿಯ ವಿನಂತಿಯನ್ನು ಬಿಜೆಪಿ ನೇತಾರರಾದ ಉಳಿಪ್ಪಾಡಿ ರಾಜೇಶ್ ನಾೈಕ್ ರವರು ಮಾಡಿರುತ್ತಾರೆ.

