ಬಂಟ್ವಾಳ: ಇತ್ತೀಚಿನ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸ್ಟುಡಿಯೋಗಳಿಂದ ಬೆಲೆೆ ಬಾಳುವ ವಸ್ತುಗಳು ಕಳವು ನಡೆಯುತ್ತಿರುವ ಬಗ್ಗೆ ಸ್ಟುಡಿಯೋ ಮಾಲಕರು ಜಾಗ್ರತೆ ವಹಿಸಬೇಕು ಎಂದು ನಗರ ಠಾಣಾ ಉಪನಿರೀಕ್ಷಕ ನಂದ ಕುಮಾರ್ ಹೇಳಿದರು.
ಅವರು ನಗರ ಠಾಣೆಯಲ್ಲಿ ಸ್ಟುಡಿಯೋ ಮಾಲಕರ ಜೋತೆ ಸಮಾಲೋಚನೆ ಸಭೆ ನಡೆಸಿ ಮುಂಜಾಗ್ರತೆಯ ಬಗ್ಗೆ ತಿಳಿಸಿದರು. ಸ್ಟುಡಿಯೋಗಳಿಗೆ ಕಾವಲುಗಾರರನ್ನು ನೇಮಿಸಬೇಕು, ಬಾಗಿಲು ಕಿಟಕಿ ಮತ್ತು ಛಾವಣಿಗಳನ್ನು ಭದ್ರಗೋಳಿಸಿ, ಅಂಗಡಿಗಳ ಒಳಗೆ ಮುನ್ಸೂಚನೆ ನೀಡುವ ಎಚ್ಚರಿಕೆ ಗಂಟೆಯನ್ನು ಅಳವಡಿಸಿ ಮತ್ತು ಸಿ,ಸಿ ಕ್ಯಾಮಾರಗಳನ್ನು ಅಳವಡಿಸಿ ಎಂದು ಸೂಚಿಸಿದರು.
