ಮೂಲ್ಕಿ:  ದ.ಕ.ಜಿಲ್ಲೆಯ ಮೂಲ್ಕಿ ಪಟ್ಟಣದ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡು ಮತ್ತು ಬಂಗಾರ ಅಂಗಾರಗುಡ್ಡೆ ಕೊಳಚೆ ಪ್ರದೇಶದ ಜನರ ಸಮಸ್ಯೆಗಳನ್ನು ಪರಿಶೀಲಿಸಲು ಬಿಜೆಪಿ ರಾಜಾಧ್ಯಕ್ಷರ ಕರೆ ನೀಡಲು ತಕ್ಷಣ ಲಿಂಗಪ್ಪಯ್ಯಕಾಡು ಮತ್ತು ಅಂಗಾರಗುಡ್ಡೆ ಕೊಳಚೆ ಪ್ರದೇಶಕ್ಕೆ ಸ್ಲಂ ಮೋರ್ಚಾದ ಜಿಲ್ಲಾಧ್ಯಕ್ಷರಾದ ರಾಮ ಅಮೀನ್ ಪಚ್ಚೆನಾಡಿ ಜಿಲ್ಲಾಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು , ಚೇತಕ್ ಪೂಜಾರಿ ಭೇಟಿ ನೀಡಿದರು.

mulki

ಅಲ್ಲಿನ ಪಂಚಾಯ್ತಿಯಲ್ಲಿ ಜೆಡಿಸ್ ಬಲವಿದ್ದರು. ಗ್ರಾಮ ಸ್ವಲ್ಪಕೂಡಾ ಅಭಿವೃದ್ಧಿ ಆಗಿಲ್ಲ. ನಮ್ಮ ಕಷ್ಟವನ್ನು ಕೇಳುವವರು ಇಲ್ಲ. ಚರಂಡಿಯ ವ್ಯವಸ್ಥೆ ಇಲ್ಲ, ನೀರಿನ ವ್ಯವಸ್ಥೆ ಇಲ್ಲ ಒಮ್ಮೆಕೂಡ ಕೊಳಚೆ ಪ್ರದೇಶಕ್ಕೆ ಎಮ್ಎಲ್ಎ ಬರಲಿಲ್ಲ. ಸೊಳ್ಳೆ ಕಚ್ಚಿ ತುಂಬಾ ಜನರಿಗೆ ಡೆಂಗ್ಯೂ, ಮಲೇರಿಯಾ, ಇಂತಹ ಮಹಾನ್ ರೋಗಕ್ಕೆ ಜನರು ತುತ್ತಾಗಿದ್ದಾರೆ. ಅಲ್ಲದೇ 850 ಕುಟುಂಬಕ್ಕೆ(10,000) ಜನರಿಗೆ ಒಬ್ಬರೇ ಡಾಕ್ಟರ್ ಎಂದು ಕಣ್ಣೀರಿಟ್ಟರು.

mulki-2

ತಕ್ಷಣವೇ ಅಲ್ಲಿನ ಡಾಕ್ಟರ್ ನ್ನು ಭೇಟಿ ಮಾಡಿದ ಜಿಲ್ಲಾಧ್ಯಕ್ಷ “ರಾಮ ಅಮೀನ್” ಅಲ್ಲಿಯ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಮತ್ತು ಆ ಸಮಸ್ಯೆಯನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ನಮ್ಮ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪನವರಿಗೆ ತಿಳಿಸಿ ಸಮಸ್ಯೆಗೆ ಸ್ಪಂದಿಸುವ ಭರವಸೆಯನ್ನು ನೀಡಿದರು.

mulki-3

ಈ ಸಂದರ್ಭದಲ್ಲಿ ಸ್ಲಂ ಮೋರ್ಚಾದ ಜಿಲ್ಲಾಧ್ಯಕ್ಷ ರಾಮ ಅಮೀನ್, ಸ್ಲಂ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು, ಚೇತಕ್ ಪೂಜಾರಿ, ಸಂಚಾಲಕರಾದ ಶೇಖರ್ ಪೂಜಾರಿ, ನವೀನ್ ಮೂಲ್ಕಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *