ಸುದ್ದಿ9 ಕೈಕಂಬ:ಕಳೆದ ಎರಡು ವಾರಗಳ ಮುಂಚೆ ಕುಪ್ಪೆಪದವು ಪುನೀತ್ ಕುಮಾರ್ ಎಂಬರ ಹಟ್ಟಿಯಿಂದ ತಲವಾರು ಝಳಪಿಸಿ ದನಕದ್ದ ಅಂತಾರಾಜ್ಯ ಕಳ್ಳರ ತಂಡವನ್ನು ಬಜ್ಪೆ ಪೊಲೀಸ್ ತಂಡ ಮಿಂಚಿನ ಕಾಯರ್ಾಚರಣೆಯಲ್ಲಿ ಸೆರೆಹಿಡಿದಿದೆ. ಜೋಕಟ್ಟೆಯ ನಿವಾಸಿಗಳಾದ ಮುಹಮ್ಮದ್ ಆಶ್ಪಕ್(25) ಯಾನೆ ಬಡವರ ಬಂಧು, ನೀರುಪಾದೆ ನಿವಾಸಿ ನಿಸಾರ್(25), ಹಾಗೂ ಬೆಳ್ತಂಗಡಿ ಮದ್ದಡ್ಕ ನಿವಾಸಿ ಉಮ್ಮರ್ ಫಾರೂಕ್(28). ಇವರ ತಂಡದಲ್ಲಿ ಇನ್ನೂ ಐದು ಮಂದಿ ಇದ್ದಾರೆ, ಎಂದು ಪೊಲೀಸರು ತಿಳಿಸಿದ್ದು ಅವರಿನ್ನೂ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ಎರಡು ಟಾಟಾಸುಮೋ ಗೋಲ್ಡ್, ಹಾಗೂ ಒಂದು ಸುಝುಕಿ ಆಲ್ಟೋ ವಾಹನಗಳನ್ನು ವಶಪಡಿಸಲಾಗಿದೆ. 

DSC_0651

DSC_0653

DSC_0655

DSC_0659

DSC_0666

DSC_0672
ದನಕಳ್ಳರು ರಾಜ್ಯದಲ್ಲಿ ತಂಡಕಟ್ಟಿಕೊಂಡು ಹಲವಾರು ಕಡೆಗಳಲ್ಲಿ ಕತ್ತಿ ಝಳಪಿಸಿಕೊಂಡು ಹಟ್ಟಿಯಿಂದಲೇ ದನಕಳ್ಳತನ ಮಾಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಇವರು ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಸಾವಿರಕ್ಕೂ ಅಧಿಕ ದನಕದ್ದಿದ್ದಾರೆ. ಇವುಗಳನ್ನು ಕದ್ದು ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ಮಡಿಕೇರಿ ಸಹಿತ ಹಲವರಿಗೆ ಒಪ್ಪಿಸುವುದು ಅವರಿಂದ ಇಂತಿಷ್ಟು ಹಣಪಡೆಯುವುದು ಇವರ ತಂಡದ ಕೆಲಸವಾಗಿದೆ. ರಾತ್ರಿ 11ರ ನಂತರ ಫೀಲ್ಡಿಗಿಳಿಯುವ ಕಳ್ಳರು ಬೆಳ್ಳಿಗ್ಗೆ 11 ಗಂಟೆಯವರೆಗೆ ಹಟ್ಟಿಯೊಳಗೆ ಹೊಕ್ಕು, ದನ ಕಳ್ಳತನ ನಡೆಸುತ್ತಾರೆ. ಮನೆಯವರು ಎಚ್ಚರವಾಗಿ ಬಿಡಿಸಲು ಬಂದರೆ ಅವರಿಗೆ ಕತ್ತಿ ಝಳಪಿಸಿ ಹೆದರಿಸಿ ಅವರೆದುರಿನಿಂದಲೇ ಕದಿಯುತ್ತಿದ್ದರು. ಒಂದು ವೇಳೆ ಮನೆಯವರು ಏರಿ ಬಂದರೆ ಎಗರಿ ಬೀಳುವುದಕ್ಕೂ ಹೇಸುತ್ತಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪುನೀತ್ ಕುಮಾರ್ ಮನೆಯಿಂದ ಕಳ್ಳತನ:
ಕಳೆ ಜೂನ್ 17ರಂದು ಕುಪ್ಪೆಪದವು ನಿವಾಸಿ ವಕೀಲ ಭಾಸ್ಕರ ಕಟ್ಟೆಮಾರ್ ಮನೆಯಲ್ಲಿ ವಾಸ್ತವ್ಯವಿದ್ದ ಪುನೀತ್ ಕುಮಾರ್ ಎಂಬವರ ಮನೆಯಿಂದ ತಡರಾತ್ರಿ ಕತ್ತಿ ಝಳಪಿಸಿಕೊಂಡು ಮನೆಯವರೆದುರೇ 4 ದನಗಳನ್ನು ಟಾಟಾಸುಮೋಗೆ ಹತ್ತಿಸಿಕೊಂಡು ಮೂಡಬಿದ್ರೆ ಕಡೆಗೆ ಎಸ್ಕೇಪ್ ಆಗಿದ್ದರು. ಈ ಬಗ್ಗೆ ಬೆಳ್ಳಂಬೆಳಗ್ಗೆಯೇ ರಸ್ತೆ ಬಂದ್ ಮಾಡಿಕೊಂಡು ಪ್ರತಿಭಟನೆ ನಡೆಸಿದ ಬಜರಂಗದಳ ಸಂಘಟನೆಗೆ ಎಸಿಪಿ ರವಿಕುಮಾರ್ ದನಕಳ್ಳರನ್ನು 10 ದಿನಗಳ ಒಳಗಾಗಿ ಹಿಡಿಯುವ ಭರವಸೆ ನೀಡಿದ್ದರು.
ತಂಡದ ರೂವಾರಿ ಈ ಬಡವರ ಬಂಧು:
ಮುಹಮ್ಮದ್ ಆಶ್ಫಕ್ ಜೋಕಟ್ಟೆಯಲ್ಲಿ ಬಡವರ ಬಂಧು ಎಂದೇ ಪರಿಚಿತನಾಗಿದ್ದಾನೆ. ಇನ್ನೂ 25ರ ಹರೆಯದ ಈ ಯುವಕ ದನಕಳ್ಳತನ ನಡೆಸಿ ಅದರಿಂದ ಬಂದ ಹಣದಲ್ಲಿ ಪುಡಿಕಾಸನ್ನು ಬಡವರಿಗೆ ಹಂಚುತ್ತಿದ್ದ ಎನ್ನಲಾಗಿದೆ. ಆದ್ದರಿಂದಲೇ ಈತ ಆ ಅಡ್ಡ ಹೆಸರನ್ನು ಗಳಿಸಿದ್ದ. ದನಕಳ್ಳತನ ನಡೆಸುವಲ್ಲಿ ಎಕ್ಸ್ಪಟರ್್ ಆಗಿದ್ದ ಈತ ಹಲ್ಲೆ ನಡೆಸುವುದಕ್ಕೂ ಹೇಸುತ್ತಿರಲಿಲ್ಲ.
ಆರೋಪಿಗಳು ಸಿಕ್ಕಿದ್ದು ಎಲ್ಲಿ?
ಕುಪ್ಪೆಪದವು ದನಕಳ್ಳತನದ ಹಿಂದಿ ಜಾಡನ್ನು ಅರಸಿ ಹೋದ ಪೊಲೀಸರಿಗೆ ಕಳ್ಳರು ಜೋಕಟ್ಟೆಯವರೇ ಎಂಬ ಮಾಹಿತಿ ದೊರಕಿ ಹೋಗಿತ್ತು. ಅದರಲ್ಲಿ ನೀರುಪಾದೆ ನಿಸಾರ್ನನ್ನು ಮಂಗಳವಾರ ರಾತ್ರಿ 10.30ರ ವೇಳೆಗೆ ಅಡ್ಡೂರಿನಲ್ಲಿ ಬಂಧಿಸಿದರೆ, ಇನ್ನಿಬ್ಬರನ್ನು ನಿನ್ನೆ ಮಧ್ಯಾಹ್ನ ಜೋಕಟ್ಟೆ ಮನೆಯಲ್ಲೇ ಬಂಧಿಸಿದ್ದಾರೆ. ಹಗಲು ಹೊತ್ತು ನಿದ್ದೆ ಮಾಡುವ ಇವರು ರಾತ್ರಿ ಹೊತ್ತು ಡ್ಯೂಟಿ ಮಾಡುತ್ತಿದ್ದರು ಎಂದು ಪೊಲೀಸರುಎಂದು ಎಸಿಪಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಮುಚ್ಚೂರುನಲ್ಲಿ ದನಕದ್ದಿದ್ದು ನಾವೇ:
ಮುಚ್ಚೂರು ವಿದ್ಯಾಧರ ಎಂಬವರ ಮನೆಯಿಂದ ಜೆಸರ್ಿ ದನಗಳನ್ನು ಕದ್ದಿದ್ದು ನಾವೇ ಎಂದು ದನಕಳ್ಳರು ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ. ಇವರ ಮೇಳೆ ಕಳೆದ ಒಂದೂವರೆ ವರ್ಷಗಳ ಹಿಂದಿನಿಂದ 10 ಕಡೆಗಳ ಪೈಕಿ 7 ಕೇಸ್ ದಾಖಲಾಗಿದ್ದು ದಾಖಲಾಗಿದ್ದು ಉಪ್ಪಿನಂಗಡಿ, ಪುತ್ತೂರು ಹಾಗೂ ಬಜ್ಪೆಯೊಂದರಲ್ಲೇ 3 ಕೇಸ್ ದಾಖಲಾಗಿದೆ. ಅಲ್ಲದೆ ಕಾರ್ಕಳ, ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ, ಪುತ್ತೂರು ಬಂಟ್ವಾಳ, ಹೊಸಂಗಡಿ, ಮೂಡಿಗೆರೆ, ಕಡೂರು, ತೀರ್ಥಹಳ್ಳಿ ಪೊಲೀಸ್ ಠಾಣೆಗಳಲ್ಲಿ ಹಲವಾರು ಕೇಸ್ಗಳು ದಾಖಲಾಗಿವೆ. ಕಳೆದ ಒಂದೂವರೆ ವರ್ಷಗಳ ಮುಂಚೆ ಇವರನ್ನು ಉಪ್ಪಿನಂಗಡಿ, ಪುತ್ತೂರುಗಳಲ್ಲಿ ಬಂಧಿಸಲಾಗಿತ್ತು. ಅದರ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ.
ದನಕದಿಯುವುದಷ್ಟೇ ಇವರ ಕೆಲಸ:
ಈ ತಂಡದ ಸದಸ್ಯರು ಕೇರಳದವರೆಗೂ ವ್ಯಾಪಿಸಿದ್ದು ದನಕದಿಯಲೆಂದೇ ತಂಡವೊಂದನ್ನು ಕಟ್ಟಿದ್ದರು. ಅದರಂತೆ ಹಟ್ಟಿಯಿಂದ ದನ ಕದ್ದು ಅವುಗಳನ್ನು ಮಾಂಸ ಮಾಡುವ ಕಟುಕರಿಗೆ ಒಪ್ಪಿಸಿ ಅವರಿಂದ ದನಗಳಿಗೆ 10ರಿಂದ 15 ಸಾವಿರ ಹಣ ಪೀಕಿಸುತ್ತಿದ್ದರು. ಅವುಗಳನ್ನು ಬಂಟ್ವಾಳ, ಮಂಗಳೂರು, ಉಪ್ಪಿನಂಗಡಿಗಳಲ್ಲಿ ಇರುವ ಅಕ್ರಮ ಕಸಾಯಿಖಾನೆಗಳಲ್ಲಿ ಮಾಂಸ ಮಾಡಿಕೊಂಡು ಹಂಚಲಾಗುತ್ತಿತ್ತು.
ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವಲ್ಲಿ ಎಕ್ಸ್ಪಟರ್್ ಆಗಿದ್ದ ಇವರು ತಾನು ತಪ್ಪಿಸಿಕೊಳ್ಳುವ ಹಾದಿಗಳಲ್ಲಿ ಪೊಲೀಸರು ಇದ್ದಾರೆಯೇ ಎಂದು ಗಮನಿಸುತ್ತಿದ್ದರು. ಹೀಗೆ ಗಮನಿಸಲೆಂದೇ ಅಲ್ಲಲ್ಲಿ ತಂಡದ ಸದಸ್ಯರನ್ನು ನಿಯೋಜಿಸಲಾಗುತ್ತಿತ್ತು. ಪೊಲೀಸರಿಲ್ಲದಿದ್ದರೆ ಇವರ ಕೆಲಸ ಸುಸೂತ್ರವಾಗಿ ನಡೆಯುತ್ತಿತ್ತು. ಒಂದು ವೇಳೆ ದನದ ಮಾಲಿಕರು ವಾಹನವನ್ನು ಅಟ್ಟಿಸಿಕೊಂಡು ಬಂದರೆ ಅವರ ಮೇಲೆ ಮುಗಿಬೀಳುವುದು ಇವರ ಕಾರ್ಯವಾಗುತಿತ್ತು.
ಐಷಾರಾಮಿ ಜೀವನಕ್ಕೆ ಮನಸೋತು:
ಕಳ್ಳರು ಐಷಾರಾಮಿ ಜೀವನಕ್ಕೆ ಮನಸೋತು ಫೀಲ್ಡ್ಗಿಳಿದಿದ್ದರು. ಒಂದು ತಿಂಗಳಲ್ಲಿ 10ರಿಂದ 12 ದನಕಳ್ಳತನ ನಡೆಸುವುದು ಇವರ ಟಾಗರ್ೆಟ್ ಆಗಿತ್ತು. ದನ ಸಾಗಿಸಲೆಂದೇ ಹೊಸತಾಗಿ ಟಾಟಾಸುಮೋ ಗೋಲ್ಡ್, ಹಾಗೂ ಒಂದು ಸುಝುಕಿ ಆಲ್ಟೋ ವಾಹನಗಳನ್ನು ಖರೀದಿಸಿದ್ದರು. ಅದರ ಹಿಂಬದಿ ಸೀಟ್ಗಳನ್ನು ತೆಗೆಸಿ ಅದಕ್ಕೆ ಟಪರ್ಾಲ್ ತೆಗೆಸಿ ಸಾಧಾರಣ 4ರಿಂದ ಐದು ದನಗಳನ್ನು ನುಗ್ಗಿಸುತ್ತಿದ್ದರು.
ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಣಂಬೂರು ಎಸಿಪಿ ರವಿಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾಯರ್ಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ನರಸಿಂಹ ಮೂತರ್ಿ, ಪಿಎಸ್ಐ ಹೆಚ್.ಎಂ. ಪೂವಪ್ಪ., ಹೆಡ್ ಕಾನ್ಸ್ಟೇಬಲ್ ರಾಜೇಶ್, ಎಎಸ್ಐ ಸೀತಾರಾಮ ಗೌಡ, ಸಿಬ್ಬಂದಿ ಶಶಿಧರ, ಜಯಾನಂದ, ಲುಕೋಸ್, ಅಬುಸಾಲಿ, ಯೋಗೀಶ್ ಹಾಗೂ ಪ್ರಕಾಶ್ ಮೂತರ್ಿ ಪಾಲ್ಗೊಂಡಿದ್ದರು.

 

By suddi9

Leave a Reply

Your email address will not be published. Required fields are marked *