ವಿಟ್ಲ: ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ವಾರ್ಷಿಕ ಕ್ರೀಡಾ ಕೂಟವನ್ನು ಎಡಪದವು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರೇಮನಾಥ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಟ್ಲದ ಉದ್ಯಮಿ ಅಶ್ರಫ್ ಒಕ್ಕೆತ್ತೂರು ಕ್ರೀಡಾಕೋಟದ ಧ್ವಜಾರೋಹಣ ನೆರವೇರಿಸಿದರು.

shv-3

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲ ವಿದ್ಯಾ ಸಂಘದ ಸಂಚಾಲಕ ಎಲ್ ಎನ್ ಕೂಡೂರು ವಹಿಸಿದ್ದರು. ಕಾರ್ಯದರ್ಶಿ ಯಶವಂತ ವಿಟ್ಲ, ಕೋಶಾಧಿಕಾರಿ ನಿತ್ಯಾನಂದ ನಾಯಕ್ ವೇದಿಕೆಯಲ್ಲಿದ್ದರು. ಗೋಪಿಕಾ ಶೆಣೈ ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು.

shv-2

ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಉದ್ಘಾಟಕರಾದ ಪ್ರೇಮನಾಥ ಶೆಟ್ಟಿಯವರನ್ನು ವಿಟ್ಲದ ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದ ವಿವಿಧ ಕ್ರೀಡಾಕೊಡುಗೆಗಳನ್ನು ಸ್ಮರಿಸಿ ವಿಠಲ ವಿದ್ಯಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

shv-1

ಪ್ರಾಂಶುಪಾಲ ಆದರ್ಶ ಎ ಎಸ್ ಸ್ವಾಗತಿಸಿದರು. ಮುಖ್ಯ ಸಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ವಂದಿಸಿದರು. ಉಪನ್ಯಾಸಕ ಶಂಕರನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *