ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ತೋಡಾರಿನ ಯೆನಪೋಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮಹಾದೇವ್ ಎ. ಜಾದವ್ ಡೆಕತ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಪೋಲ್‍ವಾಲ್ಟ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದಿದ್ದಾರೆ.
ಡಾ.ಟಿ.ಟಿ.ತಾಂತ್ರಿಕ ಕಾಲೇಜು ಕೋಲಾರದಲ್ಲಿ ನವೆಂಬರ್ 14 ರಿಂದ 19 ರವರೆಗೆ ನಡೆದ ಈ ಕ್ರೀಡಾಕೂಟದಲ್ಲಿ ರಾಜ್ಯದ 125 ತಂಡಗಳು ಭಾಗವಹಿಸಿದ್ದು, ಯೆನೆಪೋಯ ಕಾಲೇಜು 12 ನೇ ಸ್ಥಾನವನ್ನು ಪಡೆದುಕೊಂಡಿದೆ. ಕಾಲೇಜಿನ ದೈ.ಶಿ.ನಿ.ಲೋಕೇಶ್ ಅವರಿಂದ ತರಬೇತಿ ಪಡೆದಿದ್ದಾರೆ.

