ಬಂಟ್ವಾಳ : ವಕೀಲರ ಸಂಘ , ತಾಲೂಕು ಕಾನೂನು ಸೇವೆಗಳ ಸಮಿತಿ, ಒಡ್ಡೂರು ಫಾಮ್ರ್ಸ್ ಇದರ ಜಂಟಿ ಆಶ್ರಯದಲ್ಲಿ ಗಂಜಿಮಠದ ಒಡೂರು ಫಾಮ್ರ್ಸ್ ಆವರಣದಲ್ಲಿ ಕೃಷಿ ಅಧ್ಯಯನ ಹಾಗೂ ಕೃಷಿ ಸಂಬಂದಿ ಕಾನೂನು ಕಾರ್ಯಾಗಾರ ಜರಗಿತು.

jtui-1

ಬರಡು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿಕೊಂಡು ಅಭಿವೃದ್ಧಿ ಪಡಿಸಿದ ಬಗ್ಗೆ ವಕೀಲರಿಗೆ ಹಾಗೂ ಸಾರ್ವಜನಿಕರಿಗೆ ಒಡ್ಡೂರು ಫಾಮ್ರ್ಸ್ ಇದರ ಮಾಲಕರು ಪ್ರಗತಿಪರ ಕೃಷಿಕರಾದ ರಾಜೇಶ್ ನಾಯ್ಕ್ ಉಪಯುಕ್ತ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಬಿ.ಸಿ.ರೋಡ್ ನ ಹಿರಿಯ ನ್ಯಾಯವಾದಿ ಪುಂಡಿಕಾೈ ನಾರಾಯಣ ಭಟ್ ಕೃಷಿ ಸಂಬಂದಿ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.

ನವೋದಯ ವಿಕಾಸ ಯೋಜನೆ ಮಂಗಳೂರು ಇವರ ವತಿಯಿಂದ ಅನಿಲ ಸಿಲಿಂಡರ್ ಉಪಯೋಗಿಸುವ ಬಗ್ಗೆ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಸಿವಿಲ್ ನ್ಯಾಯಾಲಯದ ಹಿರಿಯ ವಿಭಾಗದ ನ್ಯಾಯಾಧೀ ಶರಾದ ಚಂದ್ರಶೇಖರ ಯು., ಕಿರಿಯ ವಿಭಾಗದ ನ್ಯಾಯಾಧೀ ಶರಾದ ಮಹೇಶ್ ಆರ್. , ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ , ನ್ಯಾಯವಾದಿಗಳಾದ ಆಶಾ ಪ್ರಸಾದ್ , ಉಮೇಶ್ ಕುಮಾರ್ ವೈ., ಸುರೇಶ್ ಪೂಜಾರಿ, ಶ್ರೀಧರ ಪೈ , ಜನಾರ್ಧನ ಶೆಟ್ಟಿ, ಜಯರಾಮ ರೈ, ಗಣೇಶಾನಂದ ಸೋಮಯಾಜಿ. ಹಾಗೂ ಹಿರಿಯ ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು. ವಕೀಲ ಪ್ರಸಾದ್ ಕುಮಾರ್ ರೈ ಸ್ವಾಗತಿಸಿದರು. ವಕೀಲ ವೀರೇಂದ್ರ ಎಂ. ವಂದಿಸಿ, ಪ್ರಧಾನ ಕಾರ್ಯದರ್ಶಿ ರಾಜಾರಾಮ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *