ಉಳ್ಳಾಲ: ನಾವು ಹೇಗೆ ಬಂದ ಅದಾಯವನ್ನು ಬ್ಯಾಂಕ್ ಖಾತೆಯ ಮೂಲಕ ಜಮಾ ಮಾಡಿ ಅಗತ್ಯ ಬಂದಾಗ ಉಪಯೋಗಿಸುತ್ತೇಅದರೆ ರೀತಿ ನೀರನ್ನು ಭೂಮಿಗೆ ಇರಿಸಿ ಬೇಕಾದಾಗ ಬಳಸಿಕೊಳ್ಳುವ ಪದ್ದತಿಯನ್ನು ರೂಪಿಸಬೇಕು ಎಂದು ದೇರಳಕಟ್ಟೆ ನೇತಾಜಿ ಪ್ರೌಢಶಾಲಾ ಶಿಕ್ಷಕಿ ನಯನ ಕರೆನೀಡಿದರು.

ಅವರು ಶುಕ್ರವಾರ ದೇರಳಕಟ್ಟೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯಲ್ಲಿ ನಡೆದ ಕ್ಲಸ್ಟರ್ ಹಂತದ ಜಲ ಮರು ಪೂರಣ ಕುರಿತು ಭಿತ್ತಿ ಚಿತ್ರ ರಚಣಾ ಸ್ಫರ್ಧೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಾವು ಪ್ರಸುತ್ತ ಕಾಲದಲ್ಲಿ ಹಣ ನೀಡಿದರೆ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತದೆ. ಕೆಲ ವರ್ಷಗಳು ಕಳೆದರೆ ಕುಡಿಯಲು ಸೂಕ್ತ ನೀರು ಸಿಗಲು ಕಷ್ಟ. ನಮ್ಮ ದೇಶ ಮುಂದುವರೆದ್ದಿದ್ದು ನೀರು ಉತ್ಪಾದನ ಯಂತ್ರ ಕಂಡುಹಿಡಿಯಲು ಯಾವ ವಿಜ್ಞಾನಿಯಿಂದಲು ಸಾಧ್ಯವಾಗಿಲ್ಲ. ನೀರು ಉತ್ಪಾದನ ಯಂತ್ರ ಯಾರಿಂದಲು ತಯಾರಿಸಲು ಸಾಧ್ಯವಿಲ್ಲ. ಜಲ ಮರು ಪೂರಣೆ ಮಾಡುವ ಮೂಲಕ ಮಾತ್ರ ಜಲ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.

ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಇಸ್ಮಾಯಿಲ್ ಪಿ.ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೊಣಾಜೆ ಮತ್ತು ದೇರಳಕಟ್ಟೆ ಕ್ಲಸ್ಟರಿನ 13 ವಿದ್ಯಾರ್ಥಿಗಳು ಭಿತ್ತಿ ಚಿತ್ರ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಚಂಚಲಾಕ್ಷಿ ಸ್ವಾಗತಿದರು. ದೇರಳಕಟ್ಟೆ ಸಿಆರ್‍ಪಿ ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು. ಕೊಣಾಜೆ ಪದವು ಸಿಆರ್‍ಪಿ ಸುಗುಣ ವಂದಿಸಿದರು.
