ಉಳ್ಳಾಲ: ಟಿಪ್ಪು ಜಯಂತಿ ಆಚರಣೆಯ ಮುಂಜಾಗೃತಾ ಕ್ರಮವಾಗಿ ಮಂಗಳೂರಿನಲ್ಲೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಸಂಜೆಯ ಹೊತ್ತಿಗೆ ಉಳ್ಳಾಲ ಪರಿಸರದಲ್ಲಿ ಬೈಕಲ್ಲಿ ಬಂದ ಮೂವರು ದುಷ್ಕರ್ಮಿಗಳು ಆರ್ ಎಸ್‌ಎಸ್ ಕಾರ್ಯಕರ್ತನ ಮೇಲೆ ತಲವಾರು ದಾಳಿ ನಡೆಸಿ ಪರಾರಿಯಾಗಿದ್ದಾರೆ. ತಲೆಯ ಹಿಂಬದಿಗೆ ಬಿದ್ದ ಏಟಿನಿಂದ ತೀವ್ರ ಗಾಯಗೊಂಡ ರಾಮಮೋಹನ್ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೋಲಿಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

