ಮೈಸೂರು: ಮೂಡುಬಿದಿರೆಯಲ್ಲಿ 2015ರ ಅಕ್ಟೋಬರ್ 9ರಂದು ಕೊಲೆಯಾದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆಯ ಆರೋಪಿ ಮುಸ್ತಾಫ್ ನನ್ನು ಮೈಸೂರು ಸಬ್‍ಜೈಲಿನಲ್ಲಿ ಹಲ್ಲೆ ನಡೆಸಿದ್ದು, ಮುಸ್ತಾಫ್ ಮೈಸೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹಲ್ಲೆ ಮಾಡಿದ ಕೈದಿಯನ್ನು ಕಿರಣ್ ಶೆಟ್ಟಿ ಎಂದು ಗುರುತಿಸಲಾಗಿದೆ.

 ಕೊಲೆಯಾದ ಆರೋಪಿ ಮುಸ್ತಾಫ ಕವೂರ್

mustafa

ಹಲ್ಲೆ ಮಾಡಿದ ಖೈದಿ ಕಿರಣ್ ಶೆಟ್ಟಿ

kiran-shetty-crime

ಈ ಕೊಲೆ ಸಂಪೂರ್ಣ ಪೂರ್ವನಿಯೋಜಿತವಾಗಿರಬಹುದೆಂಬ ಅನುಮಾನವಿದೆ. ಇಂದು ಗುರುವಾರ ಮಧ್ಯಾಹ್ನ ಭೋಜನಕ್ಕೆ ಬಿಟ್ಟ ವೇಳೆ ಮುಸ್ತಾಫ ಬಳಿ ಹೋಗುವ ಕಿರಣ್ ಶೆಟ್ಟಿ ಜಗಳ ಆರಂಭಿಸುತ್ತಾನೆ. ಮಾತಿಗೆ ಮಾತು ಬೆಳೆದ ನಂತರ ಚಾಕುವಿನಿಂದ ಮುಸ್ತಾಫಾನಿಗೆ ಇರಿಯುತ್ತಾನೆ. ಆಗ ಪೊಲೀಸರು ಹಾಗೂ ಇತರ ಕೈದಿಗಳು ಓಡಿ ಬಂದು ಮುಸ್ತಾಫಾನನ್ನು ರಕ್ಷಿಸುತ್ತಾರಾದರೂ ಕೆಆರ್ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಪ್ರಾಣ ಹೋಗುತ್ತದೆ.

By suddi9

Leave a Reply

Your email address will not be published. Required fields are marked *