ನವದೆಹಲಿ: ಮೊನ್ನೆ ರಾತ್ರಿಯಿಂದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನ ರದ್ದು ಮಾಡಲಾಗಿದೆ. ಇವುಗಳ ಬದಲಿಗೆ 500 ಮತ್ತು 2000 ನೋಟುಗಳನ್ನ ಬಿಡುಗಡೆ ಮಾಡಲು ಆರ್`ಬಿಐ ಮುಂದಾಗಿದೆ. ಆದರೆ, ಈ ಹೊಸ ನೋಟುಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ ಎಂಬ ವದಂತಿ ಹರಡಿತ್ತು. ಆದರೆ, ಇದೀಗ ಮಾಧ್ಯಮಗಳಿಗೆ ಆರ್‌ಬಿಐ ವಕ್ತಾರ ಅಲ್ಪನಾ ಕಿಲ್ಲಾವಾಲಾ ಸ್ಪಷ್ಟನೆ  ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದ್ಧಾರೆ. ಇದೇವೇಳೆ, ನೋಟುಗಳಿಗೆ ಜಿಪಿಎಸ್ ಅಳವಡಿಸುವ ತಂತ್ರಜ್ಞಾನವೇ ಅಸ್ತಿತ್ವದಲ್ಲಿಲ್ಲ ಎಂದು ಆರ್`ಬಿಐ ಸ್ಪಷ್ಟಪಡಿಸಿದೆ.

75dcaee0c844d2c97c6f5276df36e81bca0d557e

By suddi9

Leave a Reply

Your email address will not be published. Required fields are marked *