ಉಳ್ಳಾಲ: ಸುಮಾರು ವರ್ಷಗಳಿಂದ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರೀಲಿಫ್ ಸವಿರ್ಸ್ ಬಡವರ ಆಶಾಕಿರಣವಾಗಿ ನಿಮಾರ್ಣವಾಗಿದ್ದು, ಉಳ್ಳಾಲದ ಸಂಘಟನೆಗಳಲ್ಲಿ ಮಾದರಿ ಸಂಘಟನೆಯಾಗಿ ನೆಲೆನಿಂತಿದ್ದೆ ಎಂದು ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಹೇಳಿದರು.
ಅವರು ಸೋಮವಾರ ಕುಂಪಲದಲ್ಲಿ ನಡೆದ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರೀಲಿಫ್ ಸವಿರ್ಸ್ ವತಿಯಿಂದ ಮುಅಲ್ಲೀಂ ಸಂಘಟನೆಯಾದ ಎಸ್‍ಇಡಿಸಿಯ ಸ್ಪಟಿಕ ಸಂಭ್ರಮದ ಸಮಾರೋಪ ಮಹಾ ಸಮ್ಮೇಳನದ ಪ್ರಚಾರಾರ್ಥ ರೇಷನ್ ವಿತರಣಾ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ನಮ್ಮ ಆದಾಯದಿಂದ ನಮ್ಮ ಮನೆಗೆ ಬೇಕಾಗುವ ರೇಷನ್ ಸಮಾಗ್ರಿಗಳನ್ನು ಕೊಂಡೊಯ್ಯಲು ಸಾಧ್ಯವಾಗದ ಕಾಲದಲ್ಲಿ. ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ರೀಲಿಫ್ ಸವಿರ್ಸ್ ಸುಮಾರು 35 ಸಾವಿರ ರೂಪಾಯಿಯ 20 ಕುಟುಂಬಗಳಿಗೆ ನಿರಂತರ ಒಂದು ತಿಂಗಳಿಗೆ ಬೇಕಾಗುವ ರೇಷನ್ ಸಮಾಗ್ರಿಗಳನ್ನು ವಿತರಿಸುತ್ತಿದ್ದು ಈ ಕಾರ್ಯ ದೇಶಕ್ಕೆ ಮಾದರಿಯಾಗಿದೆ. ಎಸ್ಸೆಸ್ಸೆಫ್ ರಿಲೀಫ್ ಸವಿರ್ಸ್ ಗೌರವಾಧ್ಯಕ್ಷ ಹಾಜಿ ಇಕ್ಬಾಲ್ ಕುಂಪಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್ಸೆಸ್ಸೆಫ್ ರಿಲೀಫ್ ಸವಿರ್ಸ್ ಸಂಚಾಲಕ ಉಮರಬ್ಬ ರೇಷನ್ ವಿತರಿಸಿದರು.

ಈ ಸಂದರ್ಭ ನೂರುಲ್ ಇಸ್ಲಾಂ ಮಸೀದಿ ಉಪಾಧ್ಯಕ್ಷ ಹಾಜಿ ಪಿ.ಎಸ್ ಬಾವ ಕುಂಪಲ, ಉದ್ಯಮಿ ಫಾರೂಕ್ ಮಂಚಿಲ, ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಕೋಶಾಧಿಕಾರಿ ಸಮೀರ್ ಸೇವಂತಿಗುಡ್ಡೆ, ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಉಪಾಧ್ಯಕ್ಷರಾದ ಶಾಹಿದ್ ಮಂಚಿಲ, ಜುನೈದ್ ಮದನಿನಗರ, ಎಸ್ಸೆಸ್ಸೆಫ್ ರಿಲೀಫ್ ಸಮಿತಿ ಸದಸ್ಯ ತಾಜುದ್ದೀನ್ ತೊಕ್ಕೋಟ್ಟು ಉಪಸ್ಥಿತರಿದರು. ಎಸ್ಸೆಸ್ಸೆಫ್ ದ.ಕ ಕೋಶಾಧಿಕಾರಿ ಅಲ್ತಾಫ್ ಕುಂಪಲ ಸ್ವಾಗತಿಸಿ, ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಕಾರ್ಯದರ್ಶಿ ಬಾತಿಷ್ ಮಂಚಿಲ ವಂದಿಸಿದರು.

