ಸುದ್ದಿ9  ಕೈಕಂಬ : ಒಂದೆಡೆ ಉಕ್ಕಿದ ಜನ ಸಾಗರ ಮತ್ತೊಂದೆಡೆ ಮುಗಿಲು ಮುಟ್ಟಿದ ನಗೆಯ ಅಲೆಗಳ ಅಬ್ಬರ ತಮ್ಮೆಲ್ಲ ನೋವುಗಳನ್ನು ಗಾಳಿಗೆ ತೂರಿ ನಗುವಿನಲ್ಲಿ ಲೀನವಾಗಿ ಮನಗಳು ನಿರಾಳವಾಗಿ ಲಯಬದ್ದ ಚಪ್ಪಾಳೆಯ ನಿನಾದ ಕೇಳುವುದು ನೋಡುವುದು ಬಳು ಚೆಂದ ಒಟ್ಟಿನಲ್ಲಿ ಶಾಸ್ತಾವು ಶ್ರೀ ಭೂತನಾಥೇಶ್ವರ ದೇಗುಳದ ಸನ್ನಿಧಿ ಅಕ್ಕರಸಃ ಹಾಸ್ಯಲೋಕವಾಗಿ ಕಂಡಿತು. ಹೌದು ಭಾನುವಾರದ ಈದಿನ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಳದ ಸನ್ನಿಧಿಯಲ್ಲಿ ನಮ್ಮ ಟಿವಿ ವಾಹಿನಿಯ ಸಹಬಾಗಿತ್ವದಲ್ಲಿ ನಡೆದ ಬಲೇ ತೆಲಿಪಾಲೆ ಹಾಸ್ಯ ಸರಣಿಯ ಅಂತಿಮ ಹಂತದ (ಪೈನಲ್) ನೇರ ಚಿತ್ರಣವಿದು. ಮೊತ್ತ ಮೊದಲ ತುಳು ರಿಯಾಲಿಟಿ ಷೋ ಬಲೇ ತೆಲಿಪಾಲೆ ಇದರ ಸೀಸನ್ 2 ಗೆ ಇದೇ ಮೊದಲ ಬಾರಿಗೆ ಅನಿರೀಕ್ಷಿತ ಜನಸಾಗರ ಹರಿದು ಬಂದಿದೆ. ದೇವಳದ ಆಡಳಿತ ಮೊಕ್ತೇಸರ ಹಾಗೂ ಕಾರ್ಯ ಕ್ರಮದ ಪ್ರ ಧಾನ ಸಂಘಟಕ ವಿಜಯನಾಥ ವಿಠಲ ಶೆಟ್ಟಿ, ನಮ್ಮ ಟೀವಿ ಮುಖ್ಯಸ್ಥ ಡಾ. ಶಿವಶರಣ್ ಶೆಟ್ಟಿ , ಪ್ರಸಿದ್ದ ಸಂಗೀತ ನಿಧರ್ೇಶಕ ಗುರುಕಿರಣ್ ತೀಪರ್ುಗಾರರಾ ಗಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ಸಂಯೋಜಿಸಿದರು.

29vm bale thelipale 4

29 vm bale thelipale 2

29 vm bale thelipale 3

29 vm bale thelipale  1

bale1

4

bale3

DSC_0989

DSC_0308

DSC_0308 (1)

DSC_0409

DSC_0468
ಈ ದಿನದ ವಿಶೆಷಗಳು : ಬಲೆ ತೆಲಿಪಾಲೆ ವೇದಿಕೆಯಲ್ಲಿ ನಗೆ ಸಿಂಚನ, ವೇದಿಕೆಯ ಪಕ್ಕದಲ್ಲಿ ವೈದಕೀಯ ನೆರವು ಕೇಂದ್ರ, ದೇವಳದ ಆವರಣದಲ್ಲಿ ಊಟ ಉಪಹಾರದ ಅಚ್ಚುಕಟ್ಟಿನ ನಿರ್ವಹಣೆ, ಮನಸೆಳೆದ ನೃತ್ಯಗಳು , ಎಲ್ಲಾ ವ್ಯವಸ್ಥೆಗಳು ಸೂಪರ್: ಆಕರ್ಷಕ ವೇದಿಕೆ ಸುತ್ತ ಪೆವಿಲಿಯನ್,ಅಲ್ಲಲ್ಲಿ ಎಲ್ ಇ ಡಿ ಪರದೆಗಳು ಇಷ್ಟೆಲ್ಲಾ ಇದ್ದರು ಜನ ಕುಳಿತು ಕೊಳ್ಳಲಾಗದೆ ತುದಿಗಾಲಲ್ಲಿ ನಿಂತೇ ನೋಡಿದರೂ ಜನರಿಗೆ ನಗುವಿನ ಕಾರಂಜಿಯ ಮಧ್ಯೆ ಸುಸ್ತೇ ಅಣಿಸಲಿಲ್ಲ.
ಹೌದು ನಗೆ ಕಲಾವಿದರು ಲೋಕದ ಎಲ್ಲಾ ಕ್ಷೇತ್ರಗಳಿಂದಲೂ ಹಾಸ್ಯ ಪ್ರಸಂಗಗಳನ್ನು ಹಾರಿಸಿ ಜನರನ್ನು ನಗೆಯ ಕಡಲಲ್ಲಿ ಮಿಂದೆಳುವಂತೆ ಮಾಡುವಲ್ಲಿ ಸಫಲರಾದರು.
ಗೆಲುವು ಯಾರದೇ ಆಗಲಿ “ಬಲೆ ತೆಲಿಪಾಲೆ” ಕಂಡಿತ ವಿಶ್ವವನ್ನೆ ಗೆದ್ದಿದೆ .
ಚಿತ್ರ 29ವಿಎಮ್ ಬಲೇ ತೆಲಿಪಾಲೆ

By suddi9

Leave a Reply

Your email address will not be published. Required fields are marked *