ಮೂಡುಬಿದಿರೆ: ಮದರಸ ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಮೂಡುಬಿದಿರೆ ಇದರ ಮಹಾಸಭೆಯು ಮೂಡಬಿದಿರೆಯ ಬದ್ರಿಯಾ ಟೌನ್ ಜುಮಾ ಮಸೀದಿಯ ಮಹಮ್ಮದೀಯ ಮದರಸದಲ್ಲಿ ದ.ಕ ಜಿಲ್ಲಾ ಮದರಸ ಮ್ಯಾನೇಜ್‍ಮೆಂಟ್ ಇದರ ಅಧ್ಯಕ್ಷರಾದ ಹಾಜಿ. ಐ ಮೊೈದಿನಬ್ಬ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬದ್ರಿಯಾ ಟೌನ್ ಜುಮಾ ಮಸೀದಿಯ ಮುದರ್ರಿಸದ ಮುಸ್ತಫಾ ಯಮಾನಿ ದುಅಗೈದು ಸಭೆಯನ್ನು ಉದ್ಘಾಟಿಸಿದರು.

 mbd_nov5_2

ಅಧ್ಯಕ್ಷರಾಗಿ ಅಬ್ದುರ್ರಹ್ಮಾನ್ (ಅಬ್ಬುವಾಕ) , ಉಪಾಧ್ಯಕ್ಷರಾಗಿ ಡಿ.ಎ ಉಸಾನ್ ಏರ್ ಇಂಡಿಯಾ, ಎಚ್.ಎ ರಹ್ಮಾನ್ ಹೊಕ್ಕಾಡಿ, ಪ್ರಧಾನ ಕಾರ್ಯದರ್ಶಿಯಾಗಿ , ಶಬೀರ್ ಅಹ್ಮದ್ ಅಂಗರಕರ್ಯ, ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮಾಸ್ಟರ್ ಬಾರ್ದಿಲ , ಕೋಶಾಧಿಕಾರಿಯಾಗಿ ಅಶ್ರಫ್ ಮರೋಡಿ, ಲೆಕ್ಕ ಪರಿಶೋಧಕರಾಗಿ ಹಾಜಿ ಅಬ್ದುರ್ರಹ್ಮಾನ್ ಹಾಸ್ಕೋ ರವರನ್ನು ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದ ಮೇರೆಗೆ ಆಯ್ಕೆಗೊಂಡರು.

ಮೂಡುಬಿದಿರೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮಿನ್ ಅಧ್ಯಕ್ಷರಾದ ಅಬ್ದುಸ್ಸಲಾಂ ಯಮಾನಿ ಶುಭ ಹಾರೈಸಿದರು. ಕಾರ್ಯದರ್ಶಿ ಶಬೀರ್ ಅಹ್ಮದ್ ಸ್ವಾಗತಿಸಿ ವರದಿ ವಾಚಿಸಿದರು. ಕೋಶಾಧಿಕಾರಿ ಅಶ್ರಫ್ ಮರೋಡಿ ಲೆಕ್ಕ ಪತ್ರ ಮಂಡಿಸಿದರು. ವೀಕ್ಷಕರಾಗಿ ದ.ಕ ಜಿಲ್ಲಾ ಮದರಸ ಮ್ಯಾನೇಜ್ ಮೆಂಟ್‍ನ ಪ್ರಧಾನ ಕಾರ್ಯದರ್ಶಿ ಹಾಜಿ ಮಹಮ್ಮದ್ ರಫೀಕ್ ಕೊಡಾಜೆ ಮತ್ತು ಕೋಶಾಧಿಕಾರಿ ಹಾಜಿ ಜಿ.ಎಂ ಶಾಹುಲ್ ಹಮೀದ್ ಮೆಟ್ರೊ, ಮೂಡುಬಿದಿರೆ ಬದ್ರಿಯಾ ಟೌನ್ ಜುಮಾ ಮಸೀದಿಯ ಕೋಶಾಧಿಕಾರಿ ಹಾಜಿ ಬಹಾವುದ್ದೀನ್ , ಸದಸ್ಯರಾದ ಹಮೀದ್ ಶಂಸುದ್ದೀನ್ , ಲಿಯಾಖತ್ ಅಲಿ, ಎಸ್.ವೈ.ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ಲತೀಫ್ ಮದರ್ ಇಂಡಿಯಾ ಮತ್ತು ಮೂಡಬಿದಿರೆ ರೇಂಜ್‍ಗೊಳಪಟ್ಟ ಸುಮಾರು 30 ಮದರಸಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *