ಉಳ್ಳಾಲ: ಶಾಂತಿ ಸುವ್ಯವಸ್ಥೆಯ ಹಾದಿಯಲ್ಲಿ ಸಾಗುವ ಕೆಲವು ಸಂಘಟಕರು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಕೊರತೆಯಿಂದ ಹಾದಿ ತಪ್ಪುತ್ತಿವೆ. ಜನರಿಗೆ ವಿದ್ಯಾಭ್ಯಾಸ ಕೊರತೆ ಇದ್ದರೆ ಸಮಾಜ ಅಭಿವೃದ್ಧಿ ಕಾಣಲು ಸಾಧ್ಯವಾಗದು. ಆದ್ದರಿಂದ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣಕ್ಕೆ ಎಲ್ಲರು ಒತ್ತು ನೀಡಿ ಶಿಕ್ಷಣ ಬೆಳವಣಿಗೆಗೆ ಸಹಕರಿಸಬೇಕೇಂದು ಎಸ್ಸೆಸೆಫ್ ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ಹೇಳಿದರು.

ssf-ryali

ಅವರು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಇದರ ಆಶ್ರಯದಲ್ಲಿ ಎಸ್‍ಇಡಿಸಿ ಸ್ಫಟಿಕ ಸಂಭ್ರಮದ ಪ್ರಚಾರ ಮತ್ತು ಕರ್ನಾಟಕ ಯಾತ್ರೆಯ ಸ್ಮರಣಾರ್ಥ ಶುಕ್ರವಾರ ತಲಪಾಡಿಯಿಂದ ತೊಕ್ಕೊಟ್ಟು ವರೆಗೆ ನಡೆದ ಮಾನವತಾ ಸಂಚಲನಾ ಬೈಕ್ ರ್ಯಾಲಿ ಕಾಯ್ರಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉಡುಪಿಯಲ್ಲಿ ಭಾಸ್ಕರ್ ಶೆಟ್ಟಿ ಕೊಲೆ ಅವರ ಪತ್ನಿ ಮಕ್ಕಳೇ ಮಾಡಿರುವ ಘಟನೆ ನಡೆಯಿತು. ಪತ್ನಿ ಮಕ್ಕಳು ಸೇರಿ ಅವರನ್ನು ಕೊಲೆ ಮಾಡಿರುವ ಹಿನ್ನೆಲೆ ಏನಿದ್ದರೂ ಅವರಿಗೆ ಶಿಕ್ಷಣದ ಕೊರತೆಯಿಂದ ಇಂತಹ ಘಟನೆ ನಡೆದಿದೆ ಎಂದರೂ ತಪ್ಪಾಗದು. ಅವರು ಉತ್ತಮ ಶಿಕ್ಷಣ ಪಡೆದು ಸಮಾಜದ ಬಗ್ಗೆ ಅರ್ಥ ಮಾಡಿಕೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ. ಇದೇ ರೀತಿ ಪ್ರತಿಯೊಂದು ಘಟನೆಗಳು, ಕೋಮು ಸಂಘರ್ಷಗಳು ವಿವಧಡೆ ನಡೆಯುತ್ತಿವೆ. ಇದಕ್ಕೆ ತೆರೆ ಕಾಣಬೇಕಾಗಿದೆ. ಕೇಂದ್ರ ಸರಕಾರ ಜಾರಿ ಮಾಡಲಿರುವ ಏಕರೂಪ ಶಾಸನ ಧಾರ್ಮಿಕ ಸಿದ್ದಾಂತಕ್ಕೆ ಅಡಚನೆ ಉಂಟು ಮಾಡುತ್ತದೆ. ಆದ್ದರಿಂದ ಇದನ್ನು ಎಲ್ಲರೂ ವಿರೋಧಿಸಲೇ ಬೇಕೆಂದು ಕರೆ ನೀಡಿದರು.

ಸಚಿವ ಖಾದರ್ ಮಾತನಾಡಿ, ಎಸ್ಸೆಸೆಫ್ ವಿವಿಧ ಉದ್ದೇಶಗಳನ್ನಿಟ್ಟು ಮಾಡುತ್ತಿರುವ ಮಾನವತಾ ಸಂಚಲನಾ ರ್ಯಾಲಿ ಬಹಳಷ್ಟು ಮಹತ್ವತೆ ಪಡೆದಿರುತ್ತದೆ. ಇಂದಿನ ರ್ಯಾಲಿ ಮಾನವನಿಗೆ ಶಿಕ್ಷಣ ಎಷ್ಟು ಅಗತ್ಯವಿದೆ ಇದಕ್ಕಾಗಿ ನಾವು ಏನು ಮಾಡಬೇಕಾದ್ದು ಎನ್ನುವ ಬಗ್ಗೆ ಸಂಘಟಕರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಮಾಡಿದೆ. ಇಂತಹ ಕಾರ್ಯಕ್ರಮಗಳಿಂದ ಸಮಾಜದ ಎಡರು ತೊಡರುಗಳನ್ನು ನಮಗೆ ಸರಿಪಡಿಸಿಕೊಂಡು ಬರಲು ಸಾಧ್ಯವಾಗುತ್ತದೆ ಎಂದರು.

ಎಸ್ ವೈಎಸ್ ರಾಜ್ಯಾಧ್ಯಕ್ಷ ಬಾಫಕಿ ಮುಸ್ಕಿಯಾರ್‍ರವರ ಝಿಯಾರತ್ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಮುಸ್ತಫಾ ಝುಹ್ ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಜಮಾಲುದ್ದೀನ್ ಸಖಾಫಿ, ಕಾರ್ಯದರ್ಶಿ ಖುಬೈಬ್ ತಂಙಳ್, ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಸುಲೈಮಾನ್ ಹಾಜಿ ಅಸೈಗೋಳಿ ಮೊದಲಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರ. ಕಾರ್ಯದರ್ಶಿ ಇಸ್ಮಾಯಲ್ ಮಾಸ್ಟರ್ ಅತಿಥಿಗಳನ್ನು ಸ್ವಾಗತಿಸಿದರು.

By Suddi9

Leave a Reply

Your email address will not be published. Required fields are marked *