ಮೂಡುಬಿದಿರೆ: ಸೆ.2ರಂದು ಸಿಐಟಿಯು ರಾಷ್ಟ್ರವ್ಯಾಪಿ ಬಂದ್ ವೇಳೆ ಬಜರಂಗದಳ ಮುಖಂಡ ಸೋಮನಾಥ ಕೋಟ್ಯಾನ್ ಹಾಗೂ ಸಿಐಟಿಯು ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ಪ್ರಕರಣದಲ್ಲಿ ಮೂಡುಬಿದಿರೆ ಪೊಲೀಸ್ ಅಧಿಕಾರಿಗಳು ಪಕ್ಷಪಾತಿ ಧೋರಣೆಯನ್ನು ಮಾಡುತ್ತಿದ್ದಾರೆ. ಬಜರಂಗದಳ ಮುಖಂಡನಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಿಐಟಿಯು ಮೂಡುಬಿದಿರೆ ವಲಯದ ವತಿಯಿಂದ ಶುಕ್ರವಾರ ಮೂಡುಬಿದಿರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಯಿತು. ಹಳೇ ಪೊಲೀಸ್ ಠಾಣೆ ಬಳಿಯಿಂದ 50ಕ್ಕೂ ಹೆಚ್ಚು ಸಿಐಟಿಯು ಕಾರ್ಯಕರ್ತರು ಹೊಸ ಪೊಲೀಸ್ ಠಾಣೆಯವರೆಗೆ ಪ್ರತಿಭಟನಾ ಜಾಥ ನಡೆಸಿದರು.

pratibatane-3

ಸಿಐಟಿಯು ಮೂಡುಬಿದಿರೆ ವಲಯದ ಅಧ್ಯಕ್ಷೆ ರಮಣಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸೆ.2ರಂದು ಬಂದ್ ವೇಳೆ ಇಡೀ ಮೂಡುಬಿದಿರೆಯ ಜನತೆ ಬಂದ್‍ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಬಜರಂಗದಳ ಸಂಚಾಲಕ ಸೋಮನಾಥ ಕೋಟ್ಯಾನ್, ಬೆಳುವಾಯಿಯಲ್ಲಿರುವ ನನ್ನ ಅಂಗಡಿಯನ್ನು ಬಂದ್ ಮಾಡದೆ ದರ್ಪ ತೋರಿಸಿದ್ದಾರೆ. ಈ ಬಗ್ಗೆ ಸಿಐಟಿಯು ಕಾರ್ಯಕರ್ತರು ಪ್ರಶ್ನಿಸಿದಾಗ ಗುಂಪಿನಲ್ಲಿದ್ದ ಮಹಿಳೆಯರಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ, ಇಬ್ಬರು ಮಹಿಳೆಯರ ಮೇಲೆ ಅನುಚಿತ ವರ್ತನೆಯನ್ನು ತೋರಿಸಿದ್ದಾರೆ. ಈ ಕುರಿತು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದರೆ, ಆತನನ್ನು ಬಂಧಿಸುವ ಬದಲು ಠಾಣೆಯಲ್ಲಿ ರಾಜಮರ್ಯಾದೆ ನೀಡುತ್ತಿದ್ದಾರೆ.

pratibatane-2

ಪೊಲೀಸರಿಗೆ ಗೌರವ ಹಾಗೂ ಅವರಿಗೆ ಸಿಗಬೇಕಾದ ಸವಲತ್ತುಗಳ ಕುರಿತು ಸಿಐಟಿಯು ಸಂಘಟನೆ ಹೋರಾಟ ನಡೆಸಿದ, ಮೂಡುಬಿದಿರೆಗೆ ಮಹಿಳಾ ಪೊಲೀಸ್ ನೇಮಕವಾಗುವುದರ ಹಿಂದೆಯೂ ಸಂಘಟನೆಯ ಶ್ರಮವಿದೆ. ಆದರೆ ರಾಜಕೀಯ ಒತ್ತಡಕ್ಕೆ ಬಳಿಯಾಗಿ ಸೋಮನಾಥ ಕೋಟ್ಯಾನ್ ರಕ್ಷಣೆ ನೀಡುತ್ತಿರುವುದು ಸರಿಯಾದ ನೀತಿಯಲ್ಲ. ಇದು ಕೇವಲ ಸಾಂಕೇತಿಕ ಪ್ರತಿಭಟನೆಯಷ್ಟೇ, ಕಾರ್ಮಿಕರಿಗೆ, ಮಹಿಳೆಯರಿಗೆ ಹಾಗೂ ದಲಿತರಿಗೆ ಪೊಲೀಸ್ ಠಾಣೆಯಲ್ಲಿ ಸೂಕ್ತ ನ್ಯಾಯ ದೊರಕದಿದಲ್ಲಿ ತೀವ್ರವಾದ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

pratibatane

ಸಿಪಿಎಂ ಪಕ್ಷದ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ದಲಿತ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ಲಿಂಗಪ್ಪ ನಂತೂರು, ಸಿಐಟಿಯು ಮುಖಂಡರಾದ ಶಂಕರ್, ಗಿರಿಜಾ, ರಾಧ, ಸಂತೋಷ್ ಉಪಸ್ಥಿತರಿದ್ದರು. ಎಸಿಪಿ ರಾಜೇಂದ್ರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರ ಅಹವಾಲು ಸ್ವೀಕರಿಸಿದರು. ತಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ಆರೋಪಿಗಳ ರಕ್ಷಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಇನ್ಸ್‍ಪೆಕ್ಟರ್ ರಾಮಚಂದ್ರ ನಾಯಕ್, ಎಸ್‍ಐ ದೇಜಪ್ಪ ಅವರು ಪ್ರತಿಭಟನೆಗಾರರ ಜೊತೆ ಸಮಾಲೋಚನೆ ನಡೆಸಿದರು.

By Suddi9

Leave a Reply

Your email address will not be published. Required fields are marked *