ಮೂಡುಬಿದಿರೆ: ಕೋಟಿ ಚೆನ್ನಯ(ಕಪ್ಪು ಬಿಳುಪು) ಚಿತ್ರದಲ್ಲಿ ಕೋಟಿ ಪಾತ್ರಧಾರಿ, ಸಾಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದ ದಿ.ಸುಭಾಶ್ಚಂದ್ರ ಪಡಿವಾಳ್ ಅವರ ಶ್ರದ್ಧಾಂಜಲಿ ಸಭೆ ಕಲ್ಲಮುಂಡ್ಕೂರು ದೈಲಬೆಟ್ಟು ಕ್ಷೇತ್ರದಲ್ಲಿ ಗುರುವಾರ ನಡೆಯಿತು. padil-2

ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್. ಪಶುಪತಿ ಶಾಸ್ತ್ರಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೃಷಿ, ರಂಗಭೂಮಿ, ಸಿನಿಮಾ, ಧಾರ್ಮಿಕ, ಸಾಂಸ್ಕೃತಿಕ, ಸಹಕಾರಿ ರಂಗಗಳಲ್ಲಿ ಸಾಧನೆಗೈದು ಇನ್ನಿಲ್ಲವಾದ ಮಾಲ್ದಬೆಟ್ಟು ಸುಭಾಶ್ಚಂದ್ರ ಪಡಿವಾಳ್ ಅವರ ಜೀವನ ಆದರ್ಶಗಳನ್ನು ಸಾರ್ಥಕಗೊಳಿಸಲು, ಕಲ್ಲಮುಂಡ್ಕೂರು ಪ್ರೌಢಶಾಲೆಯಲ್ಲಿ ಪದವಿ ಪೂರ್ವ ತರಗತಿ ತೆರೆಯುವ ಮೂಲಕ ಗ್ರಾಮಾಂತರ ಮಕ್ಕಳಿಗೆ ಶಿಕ್ಷಣಾವಕಾಶ ನಿಡಿದಂತಾಗುತ್ತದೆ ಎಂದರು.

padil

ಪತ್ರಕರ್ತ ಕುಂಟಾಡಿ ದಯಾನಂದ ಪೈ ಮಾತನಾಡಿ, ಪಡಿವಾಳ್ ಅವರಿಗೆ ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದಲ್ಲಿ, ಅದರಲ್ಲೂ ಡಾ.ರಾಜ್‍ಕುಮಾರ್ ಜತೆ ಅಭಿನಯಿಸುವ ಅವಕಾಶವಿದ್ದರೂ ಈ ಮಣ್ಣಿನ ಕರೆಗೆ ಓಗೊಟ್ಟ ಊರಿನ ಹಿತಕ್ಕೆ ಇಲ್ಲೇ ಉಳಿದರು ಎಂದರು.

ಸುಭಾಶ್ಚಂದ್ರ ಪಡಿವಾಳರ ವ್ಯಕ್ತಿತ್ವ, ಜೀವನದ ನಡೆ, ಸಾಧನೆಗಳ ಕುರಿತಾಗಿ ಕಲ್ಲಮುಂಡ್ಕೂರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಪ್ರಕಟಿಸಿದ ಲೇಖನವನ್ನು ಶಿಕ್ಷಕಿ ಸುಶೀಲಾ ವಾಚಿಸಿದರು.

ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ವರದರಾಯ ಕಾಮತ್ , ಮಾಲ್ದಬೆಟ್ಟು ಜಯಪ್ರಕಾಶ್ ಪಡಿವಾಳ್, ಮಾಲ್ದಬೆಟ್ಟು ಮಹಾವೀರ ಪಡಿವಾಳ್, ದೈಲಬೆಟ್ಟು ಕ್ಷೇತ್ರದ ಅರ್ಚಕ ಮಂಜುನಾಥ ಭಟ್, ಮೂಡಬಿದಿರೆಯ ವಲಯ ರೈತ ಸಂಘದ ಅಧ್ಯಕ್ಷ ಎಚ್. ಧನಕೀರ್ತಿ ಬಲಿಪ, ಪ್ರೆಸ್‍ಕ್ಲಬ್ ಅಧ್ಯಕ್ಷ ಧನಂಜಯ ಮೂಡಬಿದಿರೆ, ಕಲ್ಲಮುಂಡ್ಕೂರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗಂಗಾಧರ ಕೆ., `ಮೋಕೆ’ ಕಲಾವಿದರು ಕಲ್ಲಮುಂಡ್ಕೂರು ಪರವಾಗಿ ನಾರಾಯಣ ಕುಂದರ್, ತುಳು ಸಾಹಿತಿ ಉಗ್ಗಪ್ಪ ಪೂಜಾರಿ ಮೊದಲಾದವರು ಸುಭಾಶ್ಚಂದ್ರ ಪಡಿವಾಳ್ ಅವರ ವ್ಯಕ್ತಿತ್ವ, ಸಮಾಜಮುಖಿ ಚಿಂತನೆಗಳ ಕುರಿತು ಮಾತನಾಡಿದರು.

ದೈಲಬೆಟ್ಟು ಕ್ಷೇತ್ರದ ಆಡಳಿತ ಸಮಿತಿ, ಕಲ್ಲಮುಂಡ್ಕೂರು ವ್ಯ.ಸೇ.ಸ. ಸಂಘ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ,ಯುವಕ ಮಂಡಲ, ಬ್ರಹ್ಮ ಬೈದರ್ಕಳ ಸಮಿತಿ, ಸರಕಾರಿ ಆಸ್ಪತ್ರೆಯ ಸಲಹಾ ಸಮಿತಿ, ಕಲ್ಪಸಿರಿ ಶಟ್ಲ್ ಕ್ಲಬ್, ಕಳಸಬೈಲು ಮಂಜುಶ್ರೀ ಮಹಮ್ಮಾಯೀ ಭಜನಾ ಮಂಡಳಿ, ಅಭಿನಯ ಕಲಾವೃಂದ, `ಮೋಕೆ’ ಕಲಾವಿದರು, ಗ್ರಾ.ಪಂ., ಸರಕಾರಿ ಹಿ.ಪ್ರಾ. ಶಾಲೆ, ರಾಜ್ಯ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಎಪಿಎಂಸಿ, ಮೂಡಬಿದಿರೆ ವಿದ್ಯಾವರ್ಧಕ ಸಂಘ, ರೋಟರಿ ಕ್ಲಬ್, ತುಳುಕೂಟ, ಕೃಷಿ ವಿಚಾರ ವಿನಿಮಯ ಕೇಂದ್ರ, ಜೈನ್ ಮಿಲನ್ ಮೊದಲಾದ ಸಂಘಟನೆಗಳಲ್ಲಿ ಸದಸ್ಯರಾಗಿ, ವಿವಿಧ ಪದಾಧಿಕಾರಿಯಾಗಿ, ಗೌರವ ಹುದ್ದರಿಯಾಗಿ, ಸೇವೆ ಸಲ್ಲಿಸುತ್ತ ಬಂದಿದ್ದ ಪಡಿವಾಳರ ವ್ಯಕ್ತಿತ್ವವನ್ನು ಸ್ಮರಿಸಿಕೊಂಡರು. ವಿವಿಧ ಸಂಘಟನೆಗಳ ಪ್ರಮುಖರು, ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕರಾದ ಗುರು ಎಂ.ಪಿ. ನಿರೂಪಿಸಿ ವಸಂತ ಪಿ. ವಂದಿಸಿದರು. ಸುಭಾಶ್ಚಂದ್ರ ಪಡಿವಾಳ್ ಅಭಿನಯದ `ಕೋಟಿ ಚೆನ್ನಯ’ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

By Suddi9

Leave a Reply

Your email address will not be published. Required fields are marked *