ಮೂಡುಬಿದಿರೆ: ಎಸ್.ವಿ.ಜಿ. ಗ್ರೂಪ್ ಕುಂಬಾರ ಕೊಪ್ಪಳ, ಮೈಸೂರು ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ವತಿಯಿಂದ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಮಹಿಳಾ ಕಬಡ್ಡಿ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದೆ.

kabaddi

ಫೈನಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ಪೋಲೀಸ್ ತಂಡವನ್ನು 24-18 ಅಂಕಗಳಿಂದ ಮಣಿಸಿತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡವು ಮಾತಾ ಬೆಂಗಳೂರು ತಂಡವನ್ನು ಮತ್ತು ಪೋಲಿಸ್ ತಂಡವು ಜೆ.ಕೆ.ಸಿ. ಬೆಂಗಳೂರು ತಂಡವನ್ನು ಸೋಲಿಸಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದವು. ವಿಜಯಿ ತಂಡದ ಕಾವ್ಯ ಲತಾ ಸವ್ಯಸಾಚಿ ಪ್ರಶಸ್ತಿಗೆ ಭಾಜನರಾದರು.

By suddi9

Leave a Reply

Your email address will not be published. Required fields are marked *