books-1

ಇದುವೇ ಜ್ಞಾನದ ಸಂಪತ್ತು
ಇದರಿಂದಿಲ್ಲ ಯಾವುದೇ ವಿಪತ್ತು
ಇದಕ್ಕೆ ಇದೇ ಒಂದು ಪರಿಷತ್ತು
ಇದರದೇ ಒಂದು ಜಗತ್ತು
ಪುಸ್ತಕ ಓದುವವನೇ ಸುಜ್ಞಾನಿ
ಓದದೇ ಇರುವವನೇ ಅಜ್ಞಾನಿ
ಪುಸ್ತಕವೇ ಜೀವನದ ದಾರಿ ದೀಪ
ಇದರಿಂದಲೇ ಮಾಡಿದರು ಋಷಿ ಜಪ ತಪ
ಪುಸ್ತಕಕ್ಕೆ ಇದೆ ಗ್ರಂಥಾಲಯ
ಇದುವೇ ನಮ್ಮ ದೇವಾಲಯ
ಪುಸ್ತಕವನ್ನು ಓದಿದರೆ ದೇಶ ಸುತ್ತಿದಂತೆ
ಓದದಿದ್ದರೆ ಅಜ್ಞಾನಿಯಾದಂತೆ
ಪುಸ್ತಕದಿಂದ ಕಳೆಯುವುದು ಎಲ್ಲರ ಅಜ್ಞಾನ
ಇದರಿಂದ ಎಲ್ಲರಿಗೂ ಒದಗುವುದು ಪ್ರಪಂಚದ ಜ್ಞಾನ.

ಅಮೃತಾ (ಚಿಕ್ಕಮಗಳೂರು)

By suddi9

Leave a Reply

Your email address will not be published. Required fields are marked *