very-beautiful

ತೊಟ್ಟಿಕ್ಕುವ ಹನಿಯದು..
ಹಣೆಗೆ ಬಿದ್ದು,
ಮೂಗುಸೇತುವೆಯ ಕೊಂಡಿಗೆ
ಸಾಗುತಿಹುದು….
ಅರೆರೆ ಮರೆಯಾಗಿದೆ
ಅವಳ ಕೆಂಗುಲಾಬಿ ತೋಟದ ತುಟಿಯ
ಮೇಲೆ ಚಂದ್ರನಂತೆ ಮಿಣುಗುವ
ಅವಳ ಮೂಗುತಿ.
ಎಲ್ಲೂ ಕಾಣದು
ನನ್ನ ಪ್ರತಿಬಿಂಬ..
ನಾನೇಕೋ ಕೊನೆಗೊಳ್ಳುತಿರುವೆ..
ಮುಟ್ಟಲೇನೆ ಒಡತಿ
ಬರಿದಾದ ಮೂಗುಸೇತುವೆಯ..
ಮುಟ್ಟಲಾರೆಯಲ್ಲೇ ಯಾಕೋ..
ನನ್ನ ನೋಡುವುದು ನಾನು
ಮಣ್ಣದಾ ಕೊಚ್ಚೆನದಿಯ ತೀರದಲಿ
ಮಾತ್ರನಾ….
ನಿಂತಿರುವೆ ನೋಡೆ ಒಮ್ಮೆ
ಮುಂದೆಯೆ…..

ಮಾಳ ಸುಜಿತ್ ಶೆಟ್ಟಿ (ಮನಸ್ಪತಿ)

1

By suddi9

Leave a Reply

Your email address will not be published. Required fields are marked *