ಬಂಟ್ವಾಳ: ಇಲ್ಲಿನ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಇದರ 33ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಕ್ಲಬ್ ಸ್ಥಾಪಕ ಎಂ. ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಮತ್ತು ಮುಂಬೈ ಉದ್ಯಮಿ ಸುಂದರ ರಾಜ್ ಹೆಗ್ಡೆ ಅವರ ಸಾರಥ್ಯದಲ್ಲಿ ಪ್ರೊ ಕಬಡ್ಡಿ ಮಾದರಿಯಲ್ಲಿ ಮುಕ್ತ ಮತ್ತು 60 ಕೆ.ಜಿ. ವಿಭಾಗದ ಕೋಟಿ ಚೆನ್ನಯ ಚಿನ್ನದ ಪದಕ ಕಬಡ್ಡಿ ಪಂದ್ಯಾಟ ನ.12-13ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಲಿದೆ.

kabaddi

ಬಹುಮಾನಗಳ ವಿವರ:

 ಮುಕ್ತ ವಿಭಾಗಪ್ರಥಮ:50 ಸಾವಿರ ರೂ. ಮತ್ತು ಚಿನ್ನದ ಪದಕ, ದ್ವಿತೀಯ: 30 ಸಾವಿರ ರೂ.ಮತ್ತು ಟ್ರೋಫಿ, ತೃತೀಯ: 20 ಸಾವಿರ ರೂ., ಚತುರ್ಥ: 10 ಸಾವಿರ ರೂ.,60

ಕೆ.ಜಿ.ವಿಭಾಗಪ್ರಥಮ: 35 ಸಾವಿರ ರೂ. ಮತ್ತು ಚಿನ್ನದ ಪದಕ , ದ್ವಿತೀಯ: 20 ಸಾವಿರ ರೂ.ಮತ್ತು ಟ್ರೋಫಿ, ತೃತೀಯ ಮತ್ತು ಚತುರ್ಥ: 10 ಸಾವಿರ ರೂ.ಬಹುಮಾನವಿದೆ.

ತಂಡಗಳು ಅ.28 ರಂದು ಸಂಜೆಯೊಳಗಾಗಿ ಪ್ರವೇಶ ಶುಲ್ಕದೊಂದಿಗೆ ಹೆಸರು ನೊಂದಾಯಿಸಿಕೊಳ್ಳಬೇಕು. ಅ.29ರಂದು ಬೆಳಗ್ಗೆ ಮುಖಾಮುಖಿ ಚೀಟಿ ಎತ್ತಲಾಗುವುದು ಎಂದು ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *