ಬಂಟ್ವಾಳ: ಕಡೇಶಿವಾಲಯ ಛತ್ರಪತಿ ಶಿವಾಜಿ ಮರಾಠಿ ಸಮಾಜ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮ ಅ.23ರಂದು ಕೆಮ್ಮಾನಪಲ್ಕೆ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಮೈದಾನದಲ್ಲಿ ಜರಗಿತು.
ಪುತ್ತೂರು ಕೊಂಬೆಟ್ಟು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ,ನಿವೃತ್ತ ಪೊಲೀಸ್ ಉಪನಿರೀಕ್ಷಕ ಪಿ.ಎಂ.ಕೃಷ್ಣ ನಾಯ್ಕ ಅವರು ನೂತನ ಸಂಘವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪುತ್ತೂರು ಲ್ಯಾಂಪ್ಸ್ ಸಹಕಾರಿ ಸಂಘದ ಅಧ್ಯಕ್ಷ ,ನ್ಯಾಯವಾದಿ ಮಂಜುನಾಥ ನಾಯ್ಕ್ ಎಸ್.ಎನ್.ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪುಣಚ ದೇವಿನಗರ ಶ್ರೀ ಮಹಮ್ಮಾಯ ಜೈ ಭಾರತಿ ಮರಾಠಿ ಸಂಘದ ಅಧ್ಯಕ್ಷ ಕೆ.ಬಾಬು ನಾಯ್ಕ, ನರಿಕೊಂಬು ಗ್ರಾಮದ ಶಂಭೂರು ಮರಾಠಿ ಸೇವಾ ಸಮಿತಿಯ ಅಧ್ಯಕ್ಷ ಎಂ.ಕೃಷ್ಣಪ್ಪ ನಾಯ್ಕ, ಛತ್ರಪತಿ ಶಿವಾಜಿ ಸೇವಾ ಸಂಘದ ಗೌರಾವಧ್ಯಕ್ಷ ಶೀನಾ ನಾಯ್ಕ ಅಂಬೆದಬೈಲು, ಉಪಾಧ್ಯಕ್ಷರಾದ ಪೂವಪ್ಪ ನಾಯ್ಕ ಮುಚ್ಚಿಲ, ಹೊನ್ನಪ್ಪ ನಾಯ್ಕ ಓಣಿ ಬಾಗಿಲು ,ಜೊತೆ ಕಾರ್ಯದರ್ಶಿ ಸುಜಾತ ಸಂಪೋಳಿ, ಸಂಘಟನಾ ಕಾರ್ಯದರ್ಶಿಗಳಾದ ದೇವಪ್ಪ ನಾಯ್ಕ ಬೀರಕೋಡಿ, ಗಣೇಶ್ ಸಂಪೋಳಿ, ಜಯರಾಮ ಕಲ್ಲಾಜೆ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಜಯರಾಮ ನಾಯ್ಕ ಸೂರಂಗೋಲು ಅವರು ಸ್ವಾಗತಿಸಿದರು. ಕಾರ್ಯದರ್ಶಿ ರವಿ ನಾಯ್ಕ್ ಮುಚ್ಚಿಲ ಅವರು ವಂದಿಸಿದರು. ಯೋಗೀಶ್ ನಾಯ್ಕ್ ದಾಳಿಂಬ ಅವರು ಕಾರ್ಯಕ್ರಮ ನಿರೂಪಿಸಿದರು.

